ಮಂಗಳೂರು: ಸ್ಯಾಕ್ಸೋಫೋನ್ ಕಲಾವಿದೆ ಆತ್ಮಹತ್ಯೆ

Update: 2022-05-18 14:21 GMT
ಸುಜಾತಾ ದೇವಾಡಿಗ

ಮಂಗಳೂರು : ನಗರದ ಖ್ಯಾತ ಸ್ಯಾಕ್ಸೋಫೋನ್ ಕಲಾವಿದೆಯೊಬ್ಬರು ನೇಣು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಕ್ತಿನಗರ ಫ್ಲ್ಯಾಟ್‌ನಲ್ಲಿ ನಡೆದಿದೆ.

ಸುಜಾತಾ ದೇವಾಡಿಗ (29) ಆತ್ಮಹತ್ಯೆ ಮಾಡಿಕೊಂಡ ಸ್ಯಾಕ್ಸೋಫೋನ್ ಕಲಾವಿದೆ.

ಫ್ಲ್ಯಾಟ್‌ನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಸುಜಾತಾ ಮಂಗಳವಾರ ರಾತ್ರಿ ಊಟ ಮುಗಿಸಿ ಕೋಣೆಯೊಳಗೆ ಹೋಗಿ ಚಿಲಕ ಹಾಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಉತ್ತಮ ಸ್ಯಾಕ್ಸೋ ಫೋನ್ ಕಲಾವಿದೆಯಾಗಿದ್ದ ಇವರು ಕೊರೋನ ಬಳಿಕ ಕಾರ್ಯಕ್ರಮ ಸಿಗದೆ ಮಾನಸಿಕವಾಗಿ ಕುಗ್ಗಿದ್ದರು. ಆರ್ಥಿಕವಾಗಿ ನಷ್ಟ ಅನುಭವಿಸಿದ್ದರು. ಇದರೊಂದ ಮನನೊಂದು ಆತ್ಮಹತ್ಯೆಗೈದರು ಎಂದು ತಿಳಿದು ಬಂದಿದೆ. 

ಈ ಬಗ್ಗೆ ಕಂಕನಾಡಿ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News