ಕೆಕೆಆರ್ ವಿರುದ್ಧ ಕೊನೆಯ ಓವರ್‌ನಲ್ಲಿ ರೋಚಕ ಜಯ ದಾಖಲಿಸಿದ ಲಕ್ನೊ ಪ್ಲೇ ಆಫ್‌ಗೆ ತೇರ್ಗಡೆ

Update: 2022-05-19 04:45 GMT
ಮೊಹ್ಸಿನ್ ಖಾನ್, Photo: twitter 

  ನವಿ ಮುಂಬೈ, ಮೇ 18: ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿದ ರಿಂಕು ಸಿಂಗ್(40 ರನ್,15 ಎಸೆತ, 2 ಬೌಂಡರಿ, 4 ಸಿಕ್ಸರ್)ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅರ್ಧಶತಕ(50 ರನ್, 29 ಎಸೆತ, 4 ಬೌಂ, 3 ಸಿ.)ಹೊರತಾಗಿಯೂ ಲಕ್ನೊ ಸೂಪರ್ ಕಿಂಗ್ಸ್ ‘ಸೂಪರ್’ ಬೌಲಿಂಗ್‌ಗೆ ತತ್ತರಿಸಿದ ಕೋಲ್ಕತಾ ನೈಟ್ ರೈಡರ್ಸ್ ಕೇವಲ 2 ರನ್‌ನಿಂದ ವೀರೋಚಿತ ಸೋಲುಂಡಿದೆ. 14ನೇ ಪಂದ್ಯದಲ್ಲಿ 9ನೇ ಗೆಲುವು ದಾಖಲಿಸಿದ ಲಕ್ನೊ ತಂಡ ಪ್ಲೇ-ಆಫ್‌ಗೆ ತೇರ್ಗಡೆಯಾಗಿದೆ.

ಗೆಲ್ಲಲು 211 ರನ್ ಕಠಿಣ ಗುರಿ ಪಡೆದಿದ್ದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. ನಿತಿಶ್ ರಾಣಾ(42 ರನ್), ಸ್ಯಾಮ್ ಬಿಲ್ಲಿಂಗ್ಸ್(36 ರನ್)ಒಂದಷ್ಟು ಹೋರಾಟ ನೀಡಿದರು. ಲಕ್ನೊ ಪರ ಮೊಹ್ಸಿನ್ ಖಾನ್(3-20) ಹಾಗೂ ಮಾರ್ಕಸ್ ಸ್ಟೋನಿಸ್(3-23)ತಲಾ 3 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾಣಿಕೆ ನೀಡಿದರು. 

ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಲಕ್ನೊ ತಂಡ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಕ್ವಿಂಟನ್ ಡಿಕಾಕ್(ಔಟಾಗದೆ 140 ರನ್,70 ಎಸೆತ,10 ಬೌಂಡರಿ, 10 ಸಿಕ್ಸರ್ ) ಹಾಗೂ ಕೆ.ಎಲ್.ರಾಹುಲ್(ಔಟಾಗದೆ 68, 51 ಎಸೆತ, 3 ಬೌಂಡರಿ, 4 ಸಿಕ್ಸರ್) ಅರ್ಧಶತಕದ ಸಹಾಯದಿಂದ 20 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 210 ರನ್ ಕಲೆ ಹಾಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News