"ನರಹತ್ಯೆಗೆ ಕರೆ ನೀಡಿದಾತ": ಕಾನ್‌ ಚಿತ್ರಮೇಳದಲ್ಲಿ ಸಚಿವ ಅನುರಾಗ್‌ ಠಾಕೂರ್‌ ಫೋಟೊಗೆ ಟ್ವಿಟರಿಗರ ತರಾಟೆ

Update: 2022-05-19 11:03 GMT
Photo: Twitter/filmfare

ಹೊಸದಿಲ್ಲಿ: ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರಮೇಳವಾಗಿರುವ ಕಾನ್‌ ಫಿಲ್ಮ್‌ ಫೆಸ್ಟಿವಲ್‌ ನಲ್ಲಿ ಕೇಂದ್ರ ಕ್ರೀಡೆ, ಯುವ ವ್ಯವಹಾರ, ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಕೂಡಾ ಪಾಲ್ಗೊಂಡಿದ್ದರು. ಈ ವೇಳೆ ಅವರು ಫೆಸ್ಟಿವಲ್‌ ನಲ್ಲಿ ಭಾಗಿಯಾಗಿದ್ದ ಇತರ ಭಾರತೀಯ ತಾರೆಯರೊಂದಿಗಿನ ಅವರ ಫೋಟೊಗೆ ಟ್ವಿಟರಿಗರು ಆಕ್ರೋಶದ ಕಾಮೆಂಟ್‌ ಗಳನ್ನು ಸುರಿಸಿದ್ದಾರೆ. ಈ ಹಿಂದೆ ಅನುರಾಗ್‌ ಠಾಕೂರ್‌ ಸಾರ್ವಜನಿಕವಾಗಿ ʼಗುಂಡಿಕ್ಕುವʼ ಹೇಳಿಕೆ ನೀಡಿದ್ದನ್ನು ಈ ವೇಳೆ ಬಳಕೆದಾರರು ನೆನಪಿಸಿದ್ದಾರೆ.

ಅನುರಾಗ್‌ ಠಾಕೂರ್‌ ಬಾಲಿವುಡ್‌ ತಾರೆಯರಾದ ನವಾಝುದ್ದೀನ್‌ ಸಿದ್ದೀಕಿ, ಆರ್‌. ಮಾಧವನ್‌ ಸೇರಿದಂತೆ ಇತರರೊಂದಿಗೆ ಕ್ಲಿಕ್ಕಿಸಿದ್ದ ಫೋಟೊವನ್ನು ಫಿಲ್ಮ್‌ ಫೇರ್‌ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿತ್ತು. "ನೀವಿರಲು ಇಷ್ಟಪಡುವ ಒಂದು ಸೆಲ್ಫೀ" ಎಂಬ ತಲೆಬರಹವನ್ನೂ ನೀಡಿತ್ತು. ಇದನ್ನು ರಿಟ್ವೀಟ್‌ ಮಾಡಿದ ಪತ್ರಕರ್ತ ಅಭಿಷೇಕ್‌ ಭಕ್ಷಿ, "ನರಹತ್ಯೆಗೆ ಕರೆ ನೀಡುವಾತ ಬಳಿ ಇರಲು ನಾನು ಇಷ್ಟಪಡುವುದಿಲ್ಲ" ಎಂದಿದ್ದಾರೆ. "ಇದು ಕೇವಲ ಫೋಟೊಶೂಟ್‌ ನಡೆಸಲಿಕ್ಕೆಂದೇ ಇರುವ ಸರಕಾರ" ಎಂದು ಇನ್ನೋರ್ವ ಬಳಕೆದಾರ ಕಿಚಾಯಿಸಿದ್ದಾರೆ. ಹಲವಾರು ಬಳಕೆದಾರರು ಅವರ ʼಗೋಲಿ ಮಾರೋʼ ಹೇಳಿಕೆಯನ್ನು ಪದೇ ಪದೇ ನೆನಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News