ಮಂಗಳೂರು | ನಮ್ಮ ನಾಡ ಒಕ್ಕೂಟ, 'ಟ್ಯಾಲೆಂಟ್'ನಿಂದ ಉಚಿತ ಉದ್ಯೊಗ ಮೇಳ

Update: 2022-05-22 05:26 GMT

ಮಂಗಳೂರು, ಮೇ 22: ನಮ್ಮ ನಾಡ ಒಕ್ಕೂಟ(ರಿ) ಮತ್ತು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ (ರಿ) ಇವರ ಜಂಟಿ ಆಶ್ರಯದಲ್ಲಿ ಮೆರಿಟ್ಯುಡ್ ಸ್ಕಿಲ್ ಡೆವಲಪ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಎ.ಎಂ.ಪಿ. ಇದರ ಸಹಕಾರದೊಂದಿಗೆ ಉಚಿತ ಉದ್ಯೊಗ ಮೇಳವು ಕಂಕನಾಡಿಯಲ್ಲಿರುವ ಟ್ಯಾಲೆಂಟ್ ಸಭಾಂಗಣದಲ್ಲಿ ಶನಿವಾರ ಜರುಗಿತು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಾಸ್ ಬಿಲ್ಡರ್ಸ್ ಆಡಳಿತ ನಿರ್ದೇಶಕ ಅಬ್ದುಲ್ ರವೂಫ್ ಪುತ್ತಿಗೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬ್ಯಾರೀಸ್ ಚೇಂಬರ್ ಆಫ್  ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್, ನಮ್ಮ ನಾಡ ಒಕ್ಕೂಟದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹುಸೈನ್ ಕಾರ್ಕಳ, ಕೋಶಾಧಿಕಾರಿ ಅಬ್ದುಲ್ ಹಮೀದ್ ರೋಯಲ್ ಮೂಡುಬಿದಿರೆ, ದ.ಕ. ಜಿಲ್ಲಾಧ್ಯಕ್ಷ ಡಾ.ಆರಿಫ್ ಮಸೂದ್ ಉಪಸ್ಥಿತರಿದ್ದರು.

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿದರು. ನಮ್ಮ ನಾಡ ಒಕ್ಕೂಟ ಮಂಗಳೂರು ತಾಲೂಕು ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಶೇಖ್ ಇಸಾಖ್ ವಂದಿಸಿದರು. ನಮ್ಮ ನಾಡ ಒಕ್ಕೂಟ ಬೈಂದೂರು ಘಟಕದ ಅಧ್ಯಕ್ಷ ಅಬ್ದುಲ್ ಸಮಿ ಹಳಗೇರಿ ಕಾರ್ಯಕ್ರಮ ನಿರೂಪಿಸಿದರು.

ಈ ಉದ್ಯೊಗ ಮೇಳದಲ್ಲಿ ಟೆಲಿಕಾಂ, ಸಾಫ್ಟ್ ವೇರ್, ಡಿಸೈನರ್ಸ್, ರಿಟೇಲ್ಸ್, ಸೇಲ್ಸ್, ಮಾರ್ಕೆಟಿಂಗ್ ಮತ್ತು ಇಂಜಿನಿಯರಿಂಗ್ ವಿಭಾಗದ ಹತ್ತಾರು ಕಂಪೆನಿಗಳು ಭಾಗವಹಿಸಿದ್ದವು. ದ.ಕ., ಉಡುಪಿ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳ ಸುಮಾರು 328 ಯುವಕ-ಯುವತಿಯರು ಈ ಉದ್ಯೊಗ ಮೇಳದಲ್ಲಿ ಪಾಲ್ಗೊಂಡಿದ್ದರು. ಕಂಪೆನಿಗಳ ಮೂಲಕ ಸಂದರ್ಶನ ಆಗಿ ಶಾರ್ಟ್ ಲಿಸ್ಟ್  ಆದ ಪಟ್ಟಿಯನ್ನು ಅಲ್ಪಾವಧಿಯಲ್ಲಿ ಬಿಡುಗಡೆ ಮಾಡಲಾಗುವುದು. ನೂರಕ್ಕಿಂತ ಅಧಿಕ ಅಭ್ಯರ್ಥಿಗಳು ಶಾರ್ಟ್ ಲಿಸ್ಟ್  ಆಗುವ ನಿರೀಕ್ಷೆಯಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News