ಮಂಗಳೂರು | ಲ್ಯಾಂಡ್ ಟ್ರೇಡ್ಸ್ ಅನಂತೇಶ್ ವಾಣಿಜ್ಯ ಸಂಕೀರ್ಣ ಉದ್ಘಾಟನೆ

Update: 2022-05-22 05:55 GMT

ಮಂಗಳೂರು, ಮೇ 22: ನಗರದ ರಥಬೀದಿಯಲ್ಲಿ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಮತ್ತು ಡೆವಲಪರ್ಸ್‌ ನಿರ್ಮಿಸಿದ ನೂತನ ವಾಣಿಜ್ಯ ಸಂಕೀರ್ಣ 'ಅನಂತೇಶ್ ರವಿವಾರ ಉದ್ಘಾಟನೆಗೊಂಡಿತು.

ನೂತನ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಲ್ಯಾಂಡ್ ಟ್ರೇಡ್ಸ್ ಸಂಸ್ಥೆ ಉತ್ತಮವಾದ ಕಟ್ಟಡಗಳನ್ನು ನಿರ್ಮಿಸಿ ನಗರದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೊಡುಗೆ ನೀಡಿದೆ. ಆ ಸಾಲಿಗೆ ಇದೀಗ 'ಅನಂತೇಶ್' ವಾಣಿಜ್ಯ ಸಂಕೀರ್ಣ ಸೇರಿದೆ ಎಂದು ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷ ತೆ ವಹಿಸಿದ್ದ ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಮಂಜುನಾಥ ಭಂಡಾರಿ, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಪಿ.ಎಸ್.ಪ್ರಕಾಶ್ ಉಪಸ್ಥಿತರಿದ್ದರು.

ಲ್ಯಾಂಡ್ ಟ್ರೇಡ್ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ಮಾತನಾಡಿ, ಮಂಗಳೂರಿನ ಜನಪ್ರಿಯ ಹೂ ಮಾರ್ಕೆಟ್ ಪಕ್ಕದಲ್ಲಿರುವ 'ಅನಂತೇಶ್', ಈ ಪ್ರದೇಶದ ಬಹು ಹೆಮ್ಮೆಯ ವ್ಯಾಪಾರ ಕೇಂದ್ರವಾಗಲಿದೆ. ವಿವಿಧ ವಾಣಿಜ್ಯ ಅಗತ್ಯಗಳಿಗೆ ಸರಿಹೊಂದುವಂತಹ, ಆಧುನಿಕ ವ್ಯಾಪಾರ ಯೋಜನೆಗೆ ಅನುಗುಣವಾಗಿ ಹಲವು  ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿದೆ. ನೆಲ ಮತ್ತು ನಾಲ್ಕು ಅಂತಸ್ತಿನ ಈ ಅತ್ಯಾಧುನಿಕ ವಾಣಿಜ್ಯ ಸಂಕೀರ್ಣವು ನೆಲಮಾಳಿಗೆಯಲ್ಲಿ ಪಾರ್ಕಿಂಗ್, ಎರಡು ಸ್ವಯಂಚಾಲಿತ ಲಿಫ್ಟ್ ಗಳು, ಬ್ಯಾಕಪ್ ಪವರ್ ಜನರೇಟರ್‌ನಂತಹ ಸೌಲಭ್ಯಗಳನ್ನು ಹೊಂದಿದೆ. ಮಳೆನೀರು ಕೊಯ್ಲು, ಸಿಸಿಟಿವಿ ಕ್ಯಾಮೆರಾ ಮತ್ತು ಅಗ್ನಿಶಾಮಕ ಸೌಲಭ್ಯಗಳನ್ನು ಹೊಂದಿದೆ ಎಂದು ತಿಳಿಸಿದರು.

 ಮಂಗಳೂರಿನ ಪಾರಂಪರಿಕ ಸ್ಥಳವಾಗಿರುವ ಕಾರ್‌ ಸ್ಟ್ರೀಟ್ ಸುತ್ತಮುತ್ತ ಹಲವಾರು ದೇವಾಲಯಗಳೊಂದಿಗೆ ಯಾವಾಗಲೂ ಚಟುವಟಿಕೆಗಳಿಂದ ತುಂಬಿರುತ್ತದೆ. ಈ ಪ್ರದೇಶಕ್ಕೆ ಹೊಸ ವಾಣಿಜ್ಯ ಹೆಗ್ಗುರುತನ್ನು ಕೊಡುಗೆಯಾಗಿ ನೀಡಲು ನಾವು ಹೆಮ್ಮೆ ಪಡುತ್ತೇವೆ' ಎಂದು ಹೇಳಿದರು.

“ಆನಂತೇಶ್' ಅನ್ನು ಮಂಗಳೂರಿನ ಆರ್ಕಿ-ಟೆಕ್ನಿಕ್ಸ್‌ನ ಸಂಸ್ಥೆಯ ವಾಸ್ತುಶಿಲ್ಪಿ ಪೀಟರ್ ಮಸ್ಕರೇನ್ಹಸ್ ವಿನ್ಯಾಸಗೊಳಿಸಿದ್ದಾರೆ. ನಿರ್ಮಾಣ ಕಾರ್ಯವನ್ನು ಅಂತರ್‌ ರಾಷ್ಟ್ರೀಯ ಮಟ್ಟದ ನಿರ್ಮಾಣ ಸಂಸ್ಥೆ ಎಂಫಾರ್‌ ಕನ್‌ಸಕ್ಷನ್‌ ನಿರ್ವಹಿಸಿದೆ. ನಿರ್ಮಾಣದ ಗುಣಮಟ್ಟವನ್ನು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲೆಂಟ್ಸ್ ಸಂಸ್ಥೆ ಗೋಕುಲರಾಜ್ ಅಸೋಸಿಯೇಟ್ ನಿರ್ವಹಿಸಿದೆ. ಲ್ಯಾಂಡ್ ಟ್ರೇಡ್ ಯೋಜನೆಗಳು ಪರಿಪೂರ್ಣ ದಾಖಲಾತಿಗೆ ಹೆಸರುವಾಸಿಯಾಗಿದೆ ಎಂದು ಸಂಸ್ಥೆ ಯ ಮಾಲಕ ಶ್ರೀನಾಥ ಹೆಬ್ಬಾರ್ ತಿಳಿಸಿದರು.

ಪವನ್ ಪ್ರಾರ್ಥಿಸಿದರು. ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News