ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್ ಉದ್ಘಾಟನೆ

Update: 2022-05-22 12:04 GMT

ಉಡುಪಿ, ಮೇ ೨೨: ಬುಡೋಕಾನ್ ಕರಾಟೆ ಅಂಡ್ ಸ್ಪೋರ್ಟ್ಸ್ ಅಸೋಸಿ ಯೇಶನ್ ಸಾರಾಥ್ಯದಲ್ಲಿ ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ವತಿಯಿಂದ ೨ನೇ ವರ್ಷದ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ ಶಿಪ್ ‘ಅಂಬಲಪಾಡಿ ಟ್ರೊಪಿ ೨೦೨೨’ ಇದರ ಉದ್ಘಾಟನಾ ಸಮಾರಂಭ ಶನಿವಾರ ಅಂಬಲಪಾಡಿಯ ಭವಾನಿ ಮಂಟಪದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಅಂಬಲಪಾಡಿ ಶ್ರಿಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮಧರ್ಶಿ ಡಾ.ನೀ.ಬಿ.ವಿಜಯ ಬಲ್ಲಾಳ್ ಮಾತ ನಾಡಿ, ನಾವು ಮಾನಸಿಕ ಹಾಗೂ ಶಾರೀರಿಕವಾಗಿ ಸದೃಢರಾಗಬೇಕಾದರೆ ಕ್ರೀಡೆ ಅಥವಾ ಕರಾಟೆಗೆ ಸೇರಬೇಕು. ನಮ್ಮ ದೇಶ ಗಟ್ಟಿಯಾಗಬೇಕಾದರೆ ಯುವಕರು ಹೆಚ್ಚುಹೆಚ್ಚು ಕರಾಟೆಗೆ ಸೇರಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ. ಕರಾಟೆ ಮಕ್ಕಳಿಗೆ ಶಿಸ್ತುನ್ನು ಕಲಿಸಿಕೊಡುತ್ತದೆ ಎಂದರು.

ಆಯೋಜಕ ರೆಂಷಿ ವಾಮನ್ ಪಾಲನ್ ಪ್ರಾಸ್ತಾವಿಕವಾಗಿ ಮಾತನಾಡಿದರು.  ಬಿಕೆಎಸ್‌ಎ ಮುಖ್ಯ ಸಲಹೆಗಾರ ಪ್ರಕಾಶ್ ಮಲ್ಪೆ, ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಗೋಪಾಲ್ ಸಿ ಬಂಗೇರ, ದಕ್ಷಿಣ ಕನ್ನಡ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಈಶ್ವರ್ ಕಟೀಲ್, ಅಂಬಲಪಾಡಿ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಿವಕುಮಾರ್, ಬ್ರಹ್ಮಾವರ ನಿರ್ಮಲ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಪ್ರಾಂಶುಪಾಲ ಫಾ. ಜೋಸ್ಲಿ ಡಿಸಿಲ್ವ, ಇಂದು ರಮಾನಂದ್ ಭಟ್. ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್ ಕುಂದಾಪುರ, ರಾಜು ಪೂಜಾರಿ. ಸುಧೀರ್ ಸಾಲಿಯಾನ್ ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News