ಕೊರಂಗ್ರಪಾಡಿ ಉಪಚುನಾವಣೆ: ಶಂಕರ್ ಪಾಲನ್ ಗೆಲುವು

Update: 2022-05-22 12:55 GMT

ಉಡುಪಿ : ಅಲೆವೂರು ಗ್ರಾಮ ಪಂಚಾಯತ್‌ನ ಕೊರಂಗ್ರಪಾಡಿ -೩ ವಾರ್ಡ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಶಂಕರ್ ಪಾಲನ್ ೬೭ ಮತಗಳ ಅಂತರದಲ್ಲಿ ವಿಜಯ ಸಾಧಿಸಿದ್ದಾರೆ.

ಈ ಹಿಂದೆ ಸದಸ್ಯರಾಗಿದ್ದ ಕಾಂಗ್ರೆಸ್ ಮುಖಂಡ ಪ್ರವೀಣ್ ಶೆಟ್ಟಿ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. ಚಲಾವಣೆಯಾದ ಒಟ್ಟು ೭೪೦ ಮತಗಳಲ್ಲಿ ಶಂಕರ್ ಪಾಲನ್ ೪೦೦ ಹಾಗೂ ಎದುರಾಳಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ, ಪ್ರವೀಣ್ ಶೆಟ್ಟಿ ಸಹೋದರ ಪ್ರಸಾದ್ ಜೆ.ಶೆಟ್ಟಿ ೩೩೩ ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಶಂಕರ್‌ಪಾಲನ್ ಮೊದಲ ಬಾರಿ ಗ್ರಾಪಂ ಸದಸ್ಯ ರಾಗಿ ಚುನಾಯಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News