ಮಂಗಳೂರು ಮೀನುಗಾರಿಕಾ ಕಾಲೇಜಿನಲ್ಲಿ ಅಧ್ಯಾಪಕರಿಗೆ ತರಬೇತಿ

Update: 2022-05-22 16:51 GMT

ಮಂಗಳೂರು : ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ದಡಿ  ಕಾರ್ಯನಿರ್ವಹಿಸುತ್ತಿರುವ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಹೈದರಾಬಾದಿನಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಅಂಗ ಸಂಸ್ಥೆಯಾದ ರಾಷ್ಟ್ರೀಯ ಕೃಷಿ ಸಂಶೋಧನಾ ನಿರ್ವಹಣಾ ಅಕಾಡಮಿಯ ಪ್ರಾಯೋಜಕತ್ವದಲ್ಲಿ ಇತ್ತೀಚೆಗೆ ಐದು ದಿನಗಳ ತರಬೇತಿ ಕಾರ್ಯಾಗಾರ ನಡೆಯಿತು.

ತರಬೇತಿ ಕಾರ್ಯಾಗಾರವನ್ನು ವಿವಿ ಕುಲಪತಿ ಡಾ. ಕೆ.ಸಿ. ವೀರಣ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಅಧ್ಯಾಪಕರ ಶ್ರೇಯಸ್ಸಿನಲ್ಲಿ ನೀತಿ ವಿಷಯಗಳಿಗೆ ಆದ್ಯತೆ ನೀಡಬೇಕು. ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಜ್ಞಾನವನ್ನು ಹೆಚ್ಚಿಸಲು ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಯನ್ನು ಸಂಯೋಜಿಸುವುದು ಅನಿವಾರ್ಯ ವಾಗಿರುತ್ತದೆ ಎಂದು ಹೇಳಿದರು.

ಅತಿಥಿಗಾಳಾಗಿ ಭಾಗವಹಿಸಿ ಮಾತನಾಡಿದ ರಾಷ್ಟ್ರೀಯ ಕೃಷಿ ಸಂಶೋಧನಾ ನಿರ್ವಹಣಾ ಅಕಾಡಮಿಯ ನಿರ್ದೇಶಕ ಡಾ. ಚಿ.ಶ್ರೀನಿವಾಸ ರಾವ್ ಹವಾಮಾನದ ಬದಲಾವಣೆ, ಸಸ್ಯಗಳ ಅವನತಿ, ಕೃಷಿ ವ್ಯವಹಾರ ನಿರ್ವಹಣೆ, ಪರಿಸರದ ಒತ್ತಡ ಇತ್ಯಾದಿಗಳನ್ನು ತಗ್ಗಿಸಲು ಕೌಶಲ್ಯಾಭಿವೃದ್ದಿಯ ಸಾಧನೆಗಳನ್ನು ನೀಡಿ ವಿಜ್ಞಾನಿಗಳ ಗಮನ ಹರಿಸುವುದು ಅನಿವಾರ್ಯವಾಗಿರುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಡೀನ್ ಡಾ. ಶಿವಕುಮರ್ ಎಂ. ಬೋಧನೆಯು ನಿರಂತರ ಕಲಿಕೆಯ ಪ್ರಕ್ರಿಯೆಯಾಗಿದ್ದು, ಸಾಹಿತ್ಯ ಸಮೀಕ್ಷೆಯ ಮೂಲಕ ನೂತನ ಮಾಹಿತಿ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯ ಮೂಲಕ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ಅಧ್ಯಾಪಕರುಗಳಿಗೆ ಇದೆ ಎಂದರು.

ಕಾಲೇಜಿನ ಪ್ರೊಫೆಸರ್ ಹಾಗೂ ತರಬೇತಿ ಕಾರ್ಯಕ್ರಮದ ಸಂಯೋಜಕ ಡಾ. ಎ.ಟಿ. ರಾಮಚಂದ್ರ ನಾಯ್ಕ ಮತ್ತು ರಾಷ್ಟ್ರೀಯ ಕೃಷಿ ಸಂಶೋಧನಾ ನಿರ್ವಹಣಾ ಅಕಾಡಮಿಯ ಪ್ರಧಾನ ವಿಜ್ಞಾನಿ ಮತ್ತು ತರಬೇತಿಯ ನಿರ್ದೇಶಕ ಡಾ. ಎಂ. ಬಾಲಕೃಷ್ಣ ತರಬೇತಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಡಾ. ಸುರೇಶ್ ಟಿ. ವಂದಿಸಿದರು. ಶೀತಲ್ ಕೆ.ಯು. ಕಾರ್ಯಕ್ರಮನಿರೂಪಿಸಿದರು. ನೆಹಾ ಎಂ.ಪಿ ಮತ್ತು ಖುಷಿ ಎನ್. ಪ್ರಾರ್ಥಿಸಿದರು.

ಪ್ರಭಾರ ಡೀನ್ ಡಾ. ಲಕ್ಷ್ಮೀಪತಿ ಅಧ್ಯಕ್ಷತೆಯಲ್ಲಿ ತರಬೇತಿಯ ಸಮಾರೋಪ ಸಮಾರಂಭವು ಶನಿವಾರ ನಡೆಯಿತು. ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಹಾಗೂ ವಿಸ್ತರಣಾ ನಿರ್ದೇಶಕ ಡಾ. ಎಸ್.ಎಂ. ಶಿವಪ್ರಕಾಶ್ ಪ್ರಮಾಣ ಪತ್ರ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News