×
Ad

ಉದ್ನಾ- ಮಂಗಳೂರು ಸಾಪ್ತಾಹಿಕ ಸ್ಪೆಷಲ್‌ ರೈಲ್ ಗೆ ಎರಡು ಹೆಚ್ಚುವರಿ ಕೋಚ್‌ಗಳ ಸೇರ್ಪಡೆ

Update: 2022-05-23 18:43 IST

ಉಡುಪಿ, ಮೇ23: ಉದ್ನಾ- ಮಂಗಳೂರು ಜಂಕ್ಷನ್- ಉದ್ನಾ ನಡುವೆ ಸಂಚರಿಸುವ ಸಾಪ್ತಾಹಿಕ ಬೇಸಿಗೆ ಸ್ಪೆಷಲ್ ರೈಲು ಇನ್ನು ಒಂದು ತ್ರಿ ಟಯರ್ ಎಸಿ ಹಾಗೂ ಒಂದು ಸ್ಲೀಪರ್ ಕೋಚ್‌ಗಳನ್ನು ಹೆಚ್ಚುವರಿ ಸೇರಿಸಲಾಗುವುದು.

ಈ ಮೂಲಕ ರವಿವಾರ ಉದ್ನಾದಿಂದ ಹಾಗೂ ಸೋಮವಾರ ಮಂಗಳೂರು ಜಂಕ್ಷನ್‌ನಿಂದ ಹೊರಡುವ ಈ ರೈಲು ಇನ್ನು 24 ಕೋಚ್‌ಗಳೊಂದಿಗೆ ಸಂಚರಿ ಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಇನ್ನುಳಿದಂತೆ ಗಾಂಧಿಧಾಮ-ತಿರುನಲ್ವೇಲಿ ನಡುವೆ ಸಂಚರಿಸುವ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿಗೆ ಒಂದು ಸ್ಲೀಪರ್ ಕೋಚ್ (ಒಟ್ಟು 22), ಭಾವನಗರ- ಕೊಚುವೇಲು ನಡುವೆ ಸಂಚರಿಸುವ ಸಾಪ್ತಾಹಿಕ ರೈಲಿಗೆ ಒಂದು ಸ್ಲೀಪರ್ ಕೋಚ್ (ಒಟ್ಟು 24)ನ್ನು ಸೇರ್ಪಡೆಗೊಳಿಸಲಾಗುವುದು ಎಂದೂ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News