×
Ad

ಅಜ್ಜಿನಡ್ಕ : ಯುವಕನಿಗೆ ತಂಡದಿಂದ ಚೂರಿ ಇರಿತ; ದೂರು ದಾಖಲು

Update: 2022-05-24 10:18 IST
ಆರಿಫ್

ಉಳ್ಳಾಲ : ಕ್ಷುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಯುವಕನಿಗೆ ತಂಡವೊಂದು ಚೂರಿಯಿಂದ ಇರಿದ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಅಜ್ಜಿನಡ್ಕ ಉಚ್ಚಿಲ ಬಳಿ ಮಂಗಳವಾರ ಮುಂಜಾನೆ ನಡೆದಿದೆ.

ಚೂರಿ ಇರಿತಕ್ಕೊಳಗಾದ ವ್ಯಕ್ತಿಯನ್ನು ಅಜ್ಜಿನಡ್ಕ  ನಿವಾಸಿ ಆರಿಫ್ (28) ಎಂದು ಗುರುತಿಸಲಾಗಿದೆ. ಅವರು ಧಕ್ಕೆ ಮೀನು ಮಾರುಕಟ್ಟೆಗೆ ಹೋಗಿ ಬೈಕ್ ನಲ್ಲಿ ವಾಪಸ್ ಮನೆ ಕಡೆ ಬರುವ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಹಳೇ ದ್ವೇಷದ ಕಾರಣ ನಾಲ್ವರ ತಂಡ ವಾಹನದಲ್ಲಿ ಬಂದು ಈ ಕೃತ್ಯ ಎಸಗಿದ್ದು, ಗಂಭೀರ ಗಾಯಗೊಂಡ ಆರೀಫ್ ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಈ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News