×
Ad

ಮಸೀದಿಗಳ ಧ್ವನಿವರ್ಧಕ ರಾತ್ರಿ ವೇಳೆ ಬಳಸದಂತೆ ಹಾಜಿ‌ ಮುಹಮ್ಮದ್ ಮಸೂದ್ ಮನವಿ

Update: 2022-05-24 12:12 IST
ಹಾಜಿ‌ ಮುಹಮ್ಮದ್ ಮಸೂದ್ 

ಮಂಗಳೂರು : ಸುಪ್ರೀಂ ಕೋರ್ಟ್‌ನ ಆದೇಶದಂತೆ ಎಲ್ಲಾ ಮಸೀದಿಗಳ ಆಡಳಿತ ಸಮಿತಿಯವರು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಸದಂತೆ ಮತ್ತು ಉಳಿದ ಸಮಯದಲ್ಲಿ ಧ್ವನಿವರ್ಧಕ ಬಳಸಲು ಸೂಕ್ತ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಬೇಕು ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ʼದಿ‌ ಮುಸ್ಲಿಂ ಸೆಂಟ್ರಲ್ ಕಮಿಟಿʼಯ ಅಧ್ಯಕ್ಷ ಹಾಜಿ‌ ಕೆ.ಎಸ್. ಮುಹಮ್ಮದ್ ಮಸೂದ್ ಮನವಿ ಮಾಡಿದ್ದಾರೆ.

ಧ್ವನಿವರ್ಧಕ ಮೂಲಕ ಅಝಾನ್ (ಬಾಂಗ್) ಕರೆ ಕೊಡುವ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ರಾಜ್ಯದ  ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆಯ ಸಚಿವರಿಗೆ ಪತ್ರ ಬರೆದಿದ್ದರೂ ಕೂಡ ಈವರೆಗೆ ಉತ್ತರ ಬಂದಿಲ್ಲ. ಅಧಿಕಾರಿಗಳು ಕೂಡ‌ ಸೂಕ್ತ ಮಾಹಿತಿ ನೀಡಿಲ್ಲ ಎಂದು ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News