ವಿಟ್ಲ : ಎಸೆಸೆಲ್ಸಿ ಸಾಧಕರಿಗೆ ಸನ್ಮಾನ, ಕೌನ್ಸಿಲಿಂಗ್ ಗೆ ಚಾಲನೆ

Update: 2022-05-24 10:02 GMT

ವಿಟ್ಲ: ಎಸೆಸೆಲ್ಸಿ ಸಾಧಕ ವಿದ್ಯಾರ್ಥಿಗಳನ್ನು ವಿಟ್ಲ ಕಮ್ಯೂನಿಟಿ ಸೆಂಟರ್ ನಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಅರ್ಹ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಅವಧಿಗೆ ವಿದ್ಯಾರ್ಥಿ ವೇತನ ಮತ್ತು ವಿಟ್ಲ ಆಸುಪಾಸಿನ ವಿದ್ಯಾರ್ಥಿ ಗಳಿಗೆ ತಜ್ಞ ಕೆರಿಯರ್ ಕೌನ್ಸಿಲರ್ ಗಳ ಮೂಲಕ ಪ್ರತೀ ದಿನ ಕೌನ್ಸಿಲಿಂಗ್ ಸೇವೆಯನ್ನು ಆರಂಭಿಸಲಾಯಿತು.

ಈ ಮೊದಲು ಪುತ್ತೂರು ಕಮ್ಯೂನಿಟಿ ಸೆಂಟರ್ 19 ವಿದ್ಯಾರ್ಥಿಗಳನ್ನು ಸನ್ಮಾನಿಸಿದ್ದು, ವಿಟ್ಲ ಸೆಂಟರಿನಲ್ಲಿ 13 ವಿದ್ಯಾರ್ಥಿಗಳ ಸಹಿತ ಸೆಂಟರ್ 32 ವಿದ್ಯಾರ್ಥಿಗಳನ್ನು ಅಭಿನಂಧಿಸಿದೆ.

ಎಸೆಸೆಲ್ಸಿಯಲ್ಲಿ ಈ ಬಾರಿ ಹಲವು ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕ ಪಡೆದಿದ್ದು, ವಿಟ್ಲದ ಸುತ್ತಲಿನ ಪ್ರದೇಶದ ವಿದ್ಯಾರ್ಥಿಗಳನ್ನು ಸೆಂಟರ್ ನಲ್ಲಿ ಸೇರಿಸಿ, ಅವರಿಗೆ ರಫೀಕ್ ಮಾಸ್ಟರ್ ರವರಿಂದ ಉತ್ತೇಜನಾ ಕಾರ್ಯಕ್ರಮ ನಡೆಸಲಾಯಿತು. ಅನಂತರ ಅತಿಥಿಗಳಾದ ಹಿದಾಯ  ಫೌಂಡೇಶನ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲ್, ಡಾ|ಬೀರಾನ್ ಮೊಯಿದಿನ್ ಪ್ರೆಸಿಡೆನ್ಸಿ ಯೂನಿವೆರ್ಸಿಟಿ. ಜೇಸಿಸ್ ನಿರ್ದೇಶಕ  ಹಸ್ಸನ್ ವಿಟ್ಲ, ಹಾರಿಝೋನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಇಕ್ಬಾಲ್, ವಿ.ಎಚ್ ಅಶ್ರಫ್, ನೌಶೀನ್ ಬದ್ರಿಯಾ, ವಿಟ್ಲ ಕಮ್ಯುನಿಟಿ ಸೆಂಟರ್ ಸಂಚಾಲಕ ಸಂಶುದ್ದೀನ್ ಬೈರಿಕಟ್ಟೆ, ಇಮ್ತಿಯಾಜ್ ಪಾರ್ಲೆ, ನಝೀರ್, ತೌಶೀರ್ ವಿಟ್ಲ , ಅಲ್ತಾಫ್, ಉಬೈದ್ ವಿಟ್ಲ ಬಜಾರ್, ರಝಕ್ ಕಿಸ್ವ, ಇವರು ಸನ್ಮಾನಿಸಿ ಗೌರವಿಸಿದರು.

ಯುವತಿಯರಿಗೆ ಕಣಚೂರು ಪಿಯು ಕಾಲೇಜು ಪ್ರಾಂಶುಪಾಲರಾದ ಶಾಹಿದಾ, ಪಿಎ ಕಾಲೇಜು ಪ್ರೊಫೆಸರ್ ಜಮೀಲಾ, ಡಾ. ವಾಜಿದ MBBS, ಡಾ|ಮಶ್ರೂಫಾ BDS,  ಮಿಸ್ರಿಯಾ ಇಮ್ತಿಯಾಜ್, ಹಾಫಿಲಾ, ರಮ್ಲಾ ಇವರು ಸನ್ಮಾನಿಸಿದರು.

ಅಭಿನಂಧಿಸಲ್ಪಟ್ಟ ವಿದ್ಯಾರ್ಥಿಗಳ ವಿವರ :

ಶಾಝಿಮ್ ಅಬ್ದುಲ್ ರಝಕ್ 623 ಅಂಕ, ವಿಶ್ವ ಮಂಗಳ ಹೈಸ್ಕೂಲ್ ವಿದ್ಯಾರ್ಥಿ, ಶಿಕ್ಷಣ ತಜ್ಞರಾದ ಬಿರಾನ್ ಮೊಯಿದಿನ್ ಮತ್ತು ಶಾಹಿದಾ ದಂಪತಿಗಳ ಪುತ್ರ.

ಮರಿಯಮ್ಮ ಆಸೀನ 622 ಅಂಕ,  ಕಾಡುಮಟ ಸರಕಾರಿ ಹೈಸ್ಕೂಲ್ ಕೊಲ್ನಾಡು ಸಾಲೆತ್ತೂರು ವಿದ್ಯಾರ್ಥಿನಿ, ಸಾಲೆತ್ತೂರು ಎಂ.ಮಹಮ್ಮದ್ ಮತ್ತು ಜಮೀಲಾ ದಂಪತಿಗಳ ಪುತ್ರಿ 

ಶಿಫಾನ  617 ಅಂಕ, ಸರಕಾರಿ ಹೈಸ್ಕೂಲ್ ಕಾಡುಮಠ ವಿದ್ಯಾರ್ಥಿನಿ,  ಸಾಲೆತ್ತೂರು ಸುಲೈಮಾನ್ ಮತ್ತು ಅಸ್ಮಾ ದಂಪತಿಗಳ ಪುತ್ರಿ

ಮಹಮ್ಮದ್ ಮೊರ್ತಾಝ 609 ಅಂಕ, ದಾರುಲ್ ಅಶ್ರಿಯಾ ವಿದ್ಯಾರ್ಥಿ, ಬಂಗಾರಕೋಡಿ ಬಿ.ಎಚ್.ಅಬ್ದುಲ್ ರಝಕ್ ಮತ್ತು ಅಮೀನ ದಂಪತಿಗಳ ಪುತ್ರ 

ಆಯಿಷಾ ನಾಫಿಯ 609 ಅಂಕ, ಸರಕಾರಿ ಹೈಸ್ಕೂಲ್ ವಿಟ್ಲ ವಿದ್ಯಾರ್ಥಿನಿ, ಕೊಡುಂಗಾಯಿ ಅಬೂಬಕ್ಕರ್ ಮತ್ತು ನಸೀಮಾ ದಂಪತಿಗಳ ಪುತ್ರಿ

ನೂಹ ಖದೀಜಾ 609 ಅಂಕ, ಬೈರಿಕಟ್ಟೆ ಅಬ್ದುಲ್ ಸಲೀಂ  ಮತ್ತು ಸುಮಯ್ಯ ದಂಪತಿಗಳ ಪುತ್ರಿ. 

ಫಾತಿಮಾ ತಹಸೀನಾ 607 ಅಂಕ, ವಿಟ್ಲ ಜೇಸಿಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿನಿ,  ಸಾಲೆತ್ತೂರು ಅಬ್ಬಾಸ್.ಎನ್ ಮತ್ತು ಹಾಜಿರಾ ದಂಪತಿಗಳ ಪುತ್ರಿ. 

ಶಜ್ಮಿ ಫಾತಿಮಾ 606 ಅಂಕ, ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನ ವಿದ್ಯಾರ್ಥಿನಿ, ಕನ್ಯಾನ ಇಸ್ಮಾಯಿಲ್ ಮತ್ತು ಶಾಹಿದಾ ದಂಪತಿಗಳ ಪುತ್ರಿ

ಖತೀಜಾ ರಾಹಿಲಾ 605 ಅಂಕ, ವಿಟ್ಲ ಜೇಸಿಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿನಿ, ದೇರಂದ ಬೆಟ್ಟು ಅಬ್ದುಲ್ ರಹಿಮಾನ್ ಮತ್ತು ಜಮೀಲಾ ದಂಪತಿಗಳ ಪುತ್ರಿ

ಇಸ್ಮಾಯಿಲ್ ಸಫ್ವಾನ್ 603 ಇಂಗ್ಲಿಷ್ ಮೀಡಿಯಂ ಸ್ಕೂಲ್  ವಿದ್ಯಾರ್ಥಿ, ಬೊಳಂತೂರ್ ಸುಲೈಮಾನ್ ಅವರ ಪುತ್ರ

ಸಹದಿಯ 603 ಅಂಕ, ವಿಟ್ಲ ಜೇಸಿಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿನಿ, ಸಾಲೆತ್ತೂರು ಇಬ್ರಾಹಿಂ ಮತ್ತು ಮರಿಯಮ್ಮ ದಂಪತಿಗಳ ಪುತ್ರಿ, ಹಜ್ರತ್ ಅಲಿಯಾ 603 ಅಂಕ, ವಿಟ್ಲ ಹಾರಿಝೋನ್ ಪಬ್ಲಿಕ್ ಸ್ಕೂಲ್  ವಿದ್ಯಾರ್ಥಿನಿ, ವಿಟ್ಲ ಮಹಮ್ಮದ್ M.S ಮತ್ತು ಫೌಝಿಯಾ ದಂಪತಿಗಳ ಪುತ್ರಿ. 

ಮಂಲೂರಲ್ ಬತೂಲ್ 600 ಅಂಕ, ಸರಕಾರಿ ಹೈಸ್ಕೂಲ್ ಸಾಲೆತ್ತೂರು  ವಿದ್ಯಾರ್ಥಿನಿ. ಎಸ್.ಟಿ ಮಹಮ್ಮದ್ ಮತ್ತು ಜೊಹರಾ ದಂಪತಿಗಳ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News