ಸುರತ್ಕಲ್: ಸಾಧಕರಿಗೆ ಸನ್ಮಾನ
ಮಂಗಳೂರು : ಇಂಡಿಯನ್ ಸೋಶಿಯಲ್ ಸರ್ವಿಸ್ ಮತ್ತು ನವಭಾರತ ಕ್ರಿಕೆಟರ್ಸ್ ಸುರತ್ಕಲ್ ಇದರ ಜಂಟಿ ಆಶ್ರಯದಲ್ಲಿ 25ನೆ ವಾರ್ಷಿಕೋತ್ಸವು ಸೋಮವಾರ ಸುರತ್ಕಲ್ ಕರ್ನಾಟಕ ಸೇವಾವೃಂದದ ವೇದಿಕೆಯಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಅರ್ಹ ೧೫೦ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ಬಿಎಎಸ್‌ಎಫ್‌ನ ಎಚ್.ಆರ್. ಸಂತೋಷ್ ಪೈ, ಲೆಕ್ಕಪತ್ರ ಇಲಾಖೆಯಿಂದ ನಿವೃತ್ತರಾದ ವಿಲಿಯಂ ಮಸ್ಕರೇಂಞಸ್ ಕಡಂಬೋಡಿ, ಸಮಾಜ ಸೇವಕ ಅಬ್ದುಲ್ ಹಮೀದ್ ಚೊಕ್ಕಬೆಟ್ಟು, ಎಸೆಸೆಲ್ಸಿ ಪರೀಕ್ಷೆಯಲ್ಲಿ ೬೦೪ ಅಂಕ ಗಳಿಸಿದ ಕೃಷ್ಣಾಪುರದ ಜಾಮಿಯಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಫಾತಿಮಾ ರೊಹರಾ ಅವರನ್ನು ಸನ್ಮಾನಿಸಲಾಯಿತು.
ತಂಡದ ಅಧ್ಯಕ್ಷ ಎಂ.ಕಬೀರ್ ಸುರತ್ಕಲ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಉದ್ಯಮಿ ಚಂದ್ರಕಾಂತ್, ಮನೋಜ್ ನೀರುಮಾರ್ಗ, ಶೃತಿ ಗಣೇಶ್, ಗಣೇಶ್ ಆಚಾರ್ಯ, ಅಬ್ದುಲ್ ಹಮೀದ್ ಕೆ. ಭಾಗವಹಿಸಿದ್ದರು. ತಂಡದ ಲಕ್ಷ್ಮಣ್ ಮಧ್ಯ, ಪ್ರಜ್ವಲ್ ಎಚ್. ಸುನೀಲ್, ರಾಜ್‌ಪ್ರಸಾದ್ ರೈಲ್ವೆ, ಜುಬೇರ್ ಕಟ್ಲ, ಶೇಖ್ ಅಬ್ದುಲ್ಲಾ, ನಿಖಿನ್ ಉಪಸ್ಥಿತರಿದ್ದರು. ಶ್ರೀನಿವಾಸ್ ಸುರತ್ಕಲ್ ಕಾರ್ಯಕ್ರಮ ನಿರೂಪಿಸಿದರು.