ಇಸ್ಪೀಟ್ ಜುಗಾರಿ: ಐವರು ಆರೋಪಿಗಳ ಬಂಧನ
Update: 2022-05-24 20:54 IST
ಬೈಂದೂರು : ಶಿರೂರು ಗ್ರಾಮದ ಐ.ಆರ್.ಬಿ ಕಟ್ಟಡದ ಹಿಂಬದಿಯ ಹಾಡಿಯಲ್ಲಿ ಮೇ ೨೩ರಂದು ಇಸ್ಪೀಟು ಆಡುತ್ತಿದ್ದ ಭಟ್ಕಳದ ರಮೇಶ ನಾಯಕ್(೪೦), ರಾಜು ನಾಯ್ಕ್(೪೨), ಮಂಜುನಾಥ ನಾಯ್ಕ್ (೪೬), ಸತೀಶ ನಾಯ್ಕ್(೨೮), ವಿನೋದ ನಾಯ್ಕ್(೨೧) ಎಂಬವರನ್ನು ಪೊಲೀಸರು ಬಂಧಿಸಿ, ೫,೩೮೦ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.