ಮಂಗಳೂರು : ಆನ್‌ಲೈನ್ ಮೂಲಕ ಹಣ ಪಡೆದು ವಂಚನೆ
Update: 2022-05-24 21:09 IST
ಮಂಗಳೂರು : ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಆನ್‌ಲೈನ್ ಮೂಲಕ ಮೊಬೈಲ್ ಖರೀದಿಸಲು ಹಣ ಪಾವತಿಸಿದರೂ ಹಣವನ್ನೂ ಮರಳಿಸದೆ ಮೊಬೈಲನ್ನೂ ನೀಡದೆ ವಂಚಿಸಿದ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
GADGET FACTORY” ಎಂಬ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಆನ್‌ಲೈನ್‌ನಲ್ಲಿ ಮೊಬೈಲ್ ಖರೀದಿ ಮಾಡುವ ಬಗ್ಗೆ ಬಂದ ಮಾಹಿತಿಯಂತೆ ಆ ಖಾತೆಯ ಮೆಸೆಂಜರ್‌ನಲ್ಲಿ ಫಿರ್ಯಾದಿದಾರರಿಗೆ ಗೂಗಲ್ ಪೇ ವಾಟ್ಸಾಪ್ ನಂಬ್ರ ಕಳುಹಿಸಲಾಗಿತ್ತು. ಅದನ್ನು ನಂಬಿದ ಫಿರ್ಯಾದಿದಾರರು ಹೊಸ ಮೊಬೈಲ್‌ಗೆ ಬುಕ್ ಮಾಡಿ ಮಾ.೧೩ರಿಂದ ೧೭ರ ಮಧ್ಯೆ ಹಂತ ಹಂತವಾಗಿ 66000 ರೂ.ವನ್ನು ಕೆನರಾ ಬ್ಯಾಂಕ್ ಮತ್ತು ಕರ್ಣಾಟಕ ಬ್ಯಾಂಕ್ ಖಾತೆಯಿಂದ ವರ್ಗಾವಣೆಗೊಳಿಸಿದ್ದರು.
ಆದರೆ ಈವರೆಗೂ ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಮೊಬೈಲ್ ಅಥವಾ ಪಾವತಿಸಿದ ಹಣವನ್ನು ಮರಳಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೆನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.