×
Ad

ಯುವಕ ನಾಪತ್ತೆ

Update: 2022-05-24 21:55 IST

ಮಂಗಳೂರು : ನಗರ ಹೊರವಲಯದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ವಿಜಯ ಕುಮಾರ (32) ಎಂಬವರು ನಾಪತ್ತೆಯಾದ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.

15 ದಿನಗಳ ಹಿಂದೆ ವಿಜಯ ಕುಮಾರ್ ತನ್ನ ಸ್ನೇಹಿತ ಹರೀಶ್‌ರ ಹೊಸಬೆಟ್ಟುವಿನಲ್ಲಿರುವ ರೊಮಿಗೆ ಬಂದು ಹೋಗಿರುವ ವಿಚಾರ  ಗೊತ್ತಾಗಿದೆ. ಅದರಂತೆ ಮಂಗಳೂರಿನ ವಿವಿಧ ಕಡೆ ಹುಡುಕಾಡಿ ಪತ್ತೆಯಾಗದೆ ಇರುವುದರಿಂದ ಹಾಗೂ ಆತನ ಮೊಬೈಲ್ ಸ್ವೀಚ್ ಆಫ್ ಆಗಿರುವುದಿಂದ ಕಾಣೆಯಾಗಿರುವ ವಿಜಯ್ ಕುಮಾರ್‌ನನ್ನು ಪತ್ತೆ ಮಾಡಿಕೊಡುವಂತೆ ಆತನ ತಂದೆ ನಾಗರಾಜಪ್ಪ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News