ಮೇ 27ರಂದು ಎಸ್ಡಿಪಿಐ ವತಿಯಿಂದ ಜನಾಧಿಕಾರ ಸಮಾವೇಶ
Update: 2022-05-25 17:21 IST
ಉಳ್ಳಾಲ: ಮೇ 27ರಂದು ಎಸ್ ಡಿಪಿಐ ವತಿಯಿಂದ ಅಡ್ಯಾರ್ ಕಣ್ಣೂರು ಮೈದಾನದಲ್ಲಿ ಬೃಹತ್ ಜನಾಧಿಕಾರ ಸಮಾವೇಶ ನಡೆಯಲಿದೆ.
ಅಂದು ಮಧ್ಯಾಹ್ನ 2.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ, ಕಾರ್ಯದರ್ಶಿ ಅಲ್ಫಾನ್ಸೊ ಫ್ರಾಂಕೊ, ಕೇರಳ ರಾಜ್ಯಾಧ್ಯಕ್ಷ ಅಶ್ರಫ್ ಮೌಲವಿ, ಕರ್ನಾಟಕ ರಾಜ್ಯ ಅಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿರೋಡ್ ಹೇಳಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಎಸ್ ಡಿಪಿಐ ಮಂಗಳೂರು ಉತ್ತರ ಅಧ್ಯಕ್ಷ ಯಾಸೀನ್ ಅರ್ಕುಳ, ಉಳ್ಳಾಲ ನಗರ ಅಧ್ಯಕ್ಷ ಎ.ಆರ್.ಅಬ್ಬಾಸ್, ಉಪಾಧ್ಯಕ್ಷ ಇಂತಿಯಾಝ್ , ಆಸೀಫ್ ಕೋಟೆ ಬಾಗಿಲು ಉಪಸ್ಥಿತರಿದ್ದರು.