ನಮ್ಮ ನೆಲವನ್ನು ರಶ್ಯಕ್ಕೆ ಬಿಟ್ಟುಕೊಡುವುದಿಲ್ಲ: ಝೆಲೆನ್ಸ್ಕಿ

Update: 2022-05-25 17:15 GMT

ದಾವೋಸ್, ಮೇ 25: ಯುದ್ಧ ಅಂತ್ಯಗೊಳ್ಳಬೇಕು ಎಂದು ನಮ್ಮ ನೆಲವನ್ನು ರಶ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಬುಧವಾರ ಹೇಳಿದ್ದಾರೆ.

ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಮ್ಮೇಳನದ ಸಂದರ್ಭ ವೀಡಿಯೊ ಲಿಂಕ್ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಉಕ್ರೇನ್ನಲ್ಲಿ ಏನು ನಡೆಯುತ್ತಿದೆ ಎಂಬುದು ರಶ್ಯ ಅಧ್ಯಕ್ಷ ಪುಟಿನ್ಗೆ ಇನ್ನೂ ಸಂಪೂರ್ಣ ಅರ್ಥವಾಗಿರುವಂತೆ ತೋರುವುದಿಲ್ಲ ಎಂದರು. ಸಂಘರ್ಷ ಅಂತ್ಯಗೊಳ್ಳಲು ಹೊಂದಾಣಿಕೆ ಮಾಡಿಕೊಳ್ಳುವ ಇರಾದೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಉಕ್ರೇನ್ ತನ್ನ ಪ್ರದೇಶವನ್ನು ಬಿಟ್ಟುಕೊಡುವುದಿಲ್ಲ. ನಾವು ನಮ್ಮ ದೇಶದಲ್ಲಿ , ನಮ್ಮ ನೆಲದಲ್ಲಿ ಹೋರಾಡುತ್ತಿದ್ದೇವೆ ಎಂದರು.

ಈ ಯುದ್ಧ ಯಾರೊಬ್ಬರ ವಿರುದ್ಧವೂ ಅಲ್ಲ. ಆದರೆ ನಮ್ಮ ಭೂಮಿ, ನಮ್ಮ ಸ್ವಾತಂತ್ರ್ಯ, ನಮ್ಮ ಹಕ್ಕು ಮತ್ತು ನಮ್ಮ ಭವಿಷ್ಯಕ್ಕಾಗಿನ ಯುದ್ಧ ಇದು. ರಶ್ಯ ಸಂಧಾನ ಮಾತುಕತೆಗೆ ನಿಜವಾದ ಆಸಕ್ತಿ ತೋರಿಸಬೇಕು ಮತ್ತು ಫೆಬ್ರವರಿ 24ರ ಮೊದಲು ಇದ್ದ ಸ್ಥಿತಿಗೆ ತನ್ನ ಸೇನೆಯನ್ನು ವಾಪಾಸು ಪಡೆಯಬೇಕು ಎಂದು ಝೆಲೆನ್ಸ್ಕಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News