ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರ ಮೀಸಲಾತಿ ರದ್ದುಪಡಿಸಲಿದೆ: ಸಂಸದ ಸಂಜಯ್ ಕುಮಾರ್

Update: 2022-05-26 06:48 GMT

ಹೈದರಾಬಾದ್: ತಮ್ಮ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರ ಮೀಸಲಾತಿಯನ್ನು ರದ್ದುಪಡಿಸುತ್ತದೆ. ಪರಿಶಿಷ್ಟ ಜಾತಿಗಳು (ಎಸ್‌ಸಿಗಳು), ಪರಿಶಿಷ್ಟ ಪಂಗಡಗಳು (ಎಸ್‌ಟಿಗಳು) ಮತ್ತು ಇತರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಬಿಜೆಪಿಯ ತೆಲಂಗಾಣ ಅಧ್ಯಕ್ಷ ಹಾಗೂ  ಸಂಸದ ಬಂಡಿ ಸಂಜಯ್ ಕುಮಾರ್ ಹೇಳಿದ್ದಾರೆ.

ಧಾರ್ಮಿಕ ಮತಾಂತರ ಮತ್ತು "ಲವ್ ಜಿಹಾದ್" ವಿರುದ್ಧ ತಾನು ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.

ಲವ್ ಜಿಹಾದ್ ಹೆಸರಿನಲ್ಲಿ ನನ್ನ ಸಹೋದರಿಯರು ಸಿಕ್ಕಿಬಿದ್ದು ಮೋಸ ಹೋದರೆ ಸುಮ್ಮನಿರಲು ಸಾಧ್ಯವೇ?, ಬಡವರ ಧರ್ಮ ಬದಲಾಯಿಸಲು ಮುಂದಾದರೆ ಹಿಂದೂ ಸಮಾಜ ಸಹಿಸುವುದಿಲ್ಲ, ಬಂಡಿ ಸಂಜಯ್ ಸಹಿಸುವುದಿಲ್ಲ’’ ಎಂದರು.

‘ಲವ್ ಜಿಹಾದ್’ ಹೇಳುವವರಿಗೆ ಲಾಠಿ ರುಚಿ ಸಿಗುವಂತೆ ನೋಡಿಕೊಳ್ಳುತ್ತೇವೆ, ಮತಾಂತರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ‘ಹನುಮ ಜಯಂತಿ’ ನಿಮಿತ್ತ ಕರೀಂನಗರದಲ್ಲಿ ‘ಹಿಂದೂ ಏಕತಾ ಯಾತ್ರೆ’ಯನ್ನು ಉದ್ದೇಶಿಸಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News