ಹಾಕಿ ಏಶ್ಯಕಪ್: ಇಂಡೋನೇಶ್ಯ ವಿರುದ್ಧ 16-0 ಅಂತರದ ಗೆಲುವು ದಾಖಲಿಸಿದ ಭಾರತ ಸೂಪರ್ ಫೋರ್‌ಗೆ ಅರ್ಹತೆ

Update: 2022-05-27 05:48 GMT

ಜಕಾರ್ತ: ಏಶ್ಯಕಪ್‌ನಲ್ಲಿ ಗುರುವಾರ ಆಡಿದ ತನ್ನ ಮೂರನೇ ಹಾಗೂ ಕೊನೆಯ ಗ್ರೂಪ್ ಪಂದ್ಯದಲ್ಲಿ ಆತಿಥೇಯ ಇಂಡೋನೇಶ್ಯ ತಂಡವನ್ನು ಹಾಲಿ ಚಾಂಪಿಯನ್ ಭಾರತವು 16-0 ಗೋಲುಗಳ ಅಂತರದಿಂದ ಭರ್ಜರಿಯಾಗಿ ಮಣಿಸಿದೆ.

ಈ ಗೆಲುವಿನ ಮೂಲಕ ‘ಎ’ ಗುಂಪಿನಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆದ ಭಾರತ ಟೂರ್ನಿಯಲ್ಲಿ ೂಪರ್ ಫೋರ್‌ಗೆ ಅರ್ಹತೆ ಪಡೆದಿದೆ.

ಮೊದಲೆರಡು ಲೀಗ್ ಪಂದ್ಯದಲ್ಲಿ ಪಾಕಿಸ್ತಾನ (1-1)ಹಾಗೂ ಜಪಾನ್ ವಿರುದ್ಧ (2-5)ನೀರಸ ಪ್ರದರ್ಶನ ನೀಡಿದ ಭಾರತ ಗುರುವಾರ ತನಗೆ ಎಷ್ಟು ಸಾಧ್ಯವೋ ಅಷ್ಟು ಗೋಲು ಗಳಿಸಿತು. ದಿಪ್ಸನ್ ಟಿರ್ಕಿ ಒಟ್ಟು ಐದು ಗೋಲುಗಳನ್ನು ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು.

ಬೀರೇಂದ್ರ ಲಾಕ್ರಾ ಬಳಗಕ್ಕೆ ಟೂರ್ನಿಯಲ್ಲಿ ನಾಕೌಟ್ ಹಂತಕ್ಕೇಲು 16 ಇಲ್ಲವೇ ಅದಕ್ಕಿಂತ ಹೆಚ್ಚು ಗೋಲುಗಳ ಅಂತರದಿಂದ ಗೆಲುವು ಸಾಧಿಸುವ ಅಗತ್ಯವಿತ್ತು. ಈ ಗೆಲುವಿನಿಂದ ಕೋಚ್ ಸರ್ದಾರ್ ಸಿಂಗ್ ಮುಖದಲ್ಲಿ ಮಂದಹಾಸ ಮೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News