ಬಜ್ಪೆ ಪೊಲೀಸ್ ಠಾಣೆಯ ನೂತನ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ

Update: 2022-05-27 11:05 GMT

ಬಜ್ಪೆ, ಮೇ‌ 27: ಬಜ್ಪೆ ಪೊಲೀಸ್ ಠಾಣೆಯ ನೂತನ ಕಟ್ಟಡ ಕಾಮಗಾರಿಗೆ ಮುಲ್ಕಿ - ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಶುಕ್ರವಾರ  ಶಿಲಾನ್ಯಾಸ ನೆರವೇರಿಸಿದರು.

ಈ ವೇಳೆ ಬಜ್ಪೆ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ರಾಘವ ಪಡೀಲ್‌, ತಾಪಂ ಮಾಜಿ ಸದಸ್ಯ ಜೋಕಿಂ ಡಿ ಕಾಸ್ಟಾ, ಸುಧಾಕರ ಕಾಮತ್‌, ರಿತೇಶ್‌ ಶೆಟ್ಟಿ, ಮಾಜಿ ಸದಸ್ಯ ಲೋಕೇಶ್‌ ಪೂಜಾರಿ, ವಿಜಯ ಪೂಜಾರಿ, ಆರ್.ಕೆ. ರಾಜೇಶ್‌ ಅಮೀನ್‌,‌ ಮರವೂರು ಗ್ರಾಪಂ ಮಾಜಿ ಅಧ್ಯಕ್ಷ  ಗಣೇಶ್, ಸಂತೋಷ್‌ ಡಿಸೋಜ, ಬಜ್ಪೆ ಪೊಲೀಸ್ ಠಾಣೆಯ ಎಎಸ್ಸೈ ರಾಮ ಪೂಜಾರಿ, ಪಿಎಸ್ಸೈಳಾದ  ಪೂವಪ್ಪ, ಗುರುವಪ್ಪ, ಕಾಂತಿ, ಕಮಲ ಹಾಗೂ ಪೊಲೀಸ್‌ ಸಿಬ್ಬಂದಿ ಉಪಸ್ಥಿತರಿದ್ದರು.

ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ 2 ಕೋಟಿ ರೂ. ಅನುದಾನದಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News