×
Ad

ಕುಂದಾಪುರ | ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣ: ಓರ್ವ ಆರೋಪಿಯ ಬಂಧನ

Update: 2022-05-28 10:57 IST
ಮೊಳಹಳ್ಳಿ ಗಣೇಶ ಶೆಟ್ಟಿ

ಕುಂದಾಪುರ, ಮೇ 28: ಉದ್ಯಮಿ ಕಟ್ಟೆ ಗೋಪಾಲಕೃಷ್ಣ ರಾವ್ ಯಾನೆ ಭೋಜಣ್ಣ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಉದ್ಯಮಿ ಮೊಳಹಳ್ಳಿ ಗಣೇಶ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ.

 ಮೃತರ ಪುತ್ರ ಕಟ್ಟೆ ಸುಧೀಂದ್ರ ಅವರು ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದು, ತನ್ನ ತಂದೆಯ ಸಾವಿಗೆ ಮೊಳಹಳ್ಳಿ ಗಣೇಶ್‌ ಶೆಟ್ಟಿ ಮತ್ತು ಬ್ರೋಕರ್‌ ಇಸ್ಮಾಯೀಲ್‌ ಅವರ ಪ್ರಚೋದನೇಯೇ ಕಾರಣ ಎಂದು ಆರೋಪಿಸಿದ್ದರು.

ಅದರಂತೆ ಪೊಲೀಸರು ಗಣೇಶ್‌ ಶೆಟ್ಟಿಯವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿ ಇಸ್ಮಾಯೀಲ್‌ ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದಾರೆ.

ಕಟ್ಟೆ ಭೋಜಣ್ಣ ಅವರು ಮೇ 26ರಂದು ಬೆಳಗ್ಗೆ ಮೊಳಹಳ್ಳಿ ಗಣೇಶ್‌ ಶೆಟ್ಟಿಯವರ ಮನೆಯಲ್ಲಿ ಪಿಸ್ತೂಲಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News