ಕದಿಕೆ‌ ಹಳೆಯಂಗಡಿಯ ಸೈಯ್ಯದ್ ಮೌಲಾನ ರಾಷ್ಟ್ರೀಯ ಸಮಿತಿ ಮಹಾ ಸಭೆ

Update: 2022-05-29 06:28 GMT

ಹಳೆಯಂಗಡಿ : ಹಳೆಯಂಗಡಿ‌ ಕದಿಕೆ ಜುಮಾ‌ ಮಸೀದಿಗೆ ಒಳಪಟ್ಟ ಸೈಯ್ಯದ್ ಮೌಲಾನಾ ರಾಷ್ಟ್ರೀಯ ಸಮಿತಿ ಸೌದಿ ಅರೇಬಿಯಾ ಇದರ ವಾರ್ಷಿಕ ಮಹಾಸಭೆಯು ಶುಕ್ರವಾರ ಜುಮಾ ನಮಾಝ್ ಬಳಿಕ ಜುಬೈಲ್ ನಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ಅಬ್ದುಲ್ ಖಾದರ್ ಕದಿಕೆ ವಹಿಸಿದ್ದರು. ಕಾರ್ಯದರ್ಶಿ ಅಬ್ದುಲ್ ರಹೀಮ್ ಹಳೆಯಂಗಡಿ ವರದಿ ವಾಚನಗೈದು, ಲೆಕ್ಕ ಪತ್ರ ಮಂಡಿಸಿದರು. ಅಬ್ದುಲ್ ಮಜೀದ್ ಮೂಡುತೋಟ ಕಿರಾಅತ್ ಪಠಿಸಿದರು. 

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕದಿಕೆ‌ ಹಳೆಯಂಗಡಿ‌‌ ಕೇಂದ್ರ ಜುಮಾ‌‌ ಮಸೀದಿಯ ಮಾಜಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಕಡಪುರ, ಸೈಯ್ಯದ್ ಮೌಲಾನ ಸಮೀತಿಯ ಸ್ಥಾಪಕ‌ ಸದಸ್ಯ ಶಮೀಮ್ ಸಾಗ್, ಹಿರಿಯ ಸದಸ್ಯರಾದ ಹಸನಬ್ಬ ಮೂಡುತೋಟ, ಆಸಿಫ್ ಕಲ್ಲಾಪು, ಇಲ್ಯಾಸ್ ಮೂಡುತೋಟ ಸಾಗ್,  ಕಲಂದರ್ ಕದಿಕೆ ಉಪಸ್ಥಿತರಿದ್ದರು. ಮುಹಮ್ಮದ್ ಶಿಹಾಬುದ್ದೀನ್ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭ ನೂತನ ಸಾಲಿನ ರಾಷ್ಟ್ರೀಯ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಕದಿಕೆ, ಉಪಾಧ್ಯಕ್ಷರಾಗಿ ಅಬ್ದುಲ್ ಸಲಾಂ ಮೂಡುತೋಟ, ಗೌರವಾಧ್ಯಕ್ಷರಾಗಿ ಶಮೀಮ್ ಸಾಗ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹೀಮ್ ಹಳೆಯಂಗಡಿ ಜೊತೆ ಕಾರ್ಯದರ್ಶಿಯಾಗಿ ನಿಸಾರ್ ಸಂತೆಕಟ್ಟೆ, ಕೋಶಾಧಿಕಾರಿಯಾಗಿ ಶಮೀರ್ ಕಡಪುರ ಆಡಳಿತ ವಿಭಾಗ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಯಾಗಿ ಮುಹಮ್ಮದ್ ಶಿಹಾಬುದ್ದೀನ್ ಮೂಡುತೋಟ ಆಯ್ಕೆಯಾದರು. 

ನೂತನ ಸಮಿತಿಯ ಸದಸ್ಯರಾಗಿ ಅಬ್ದುಲ್ ಮಜೀದ್ ಮೂಡುತೋಟ,  ಮುಹಮ್ಮದ್ ಇರ್ಷಾದ್ ಕದಿಕೆ, ಸಲೀಂ ಕದಿಕೆ, ಪರ್ವೀಝ್ ಮೂಡುತೋಟ ಹಾಗೂ ಆಸೀಫ್ ಕಲ್ಲಾಪು ಅವರನ್ನು ಆಯ್ಕೆ ಮಾಡಲಾಯಿತು. ಅಬ್ದುಲ್ ಸಲಾಂ ಮೂಡುತೋಟ ಧನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News