ತಂಬಾಕು ನಿಯಂತ್ರಣ ತನಿಖಾದಳದಿಂದ ದಾಳಿ
Update: 2022-05-31 20:03 IST
ಉಡುಪಿ : ಉಡುಪಿ ತಾಲೂಕಿನಲ್ಲಿ ಕೊಟ್ಪಾ-೨೦೦೩ ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳದ ವತಿಯಿಂದ ತಾಲೂಕಿನ ನಗರ ವ್ಯಾಪ್ತಿ ಪ್ರದೇಶದಲ್ಲಿ ತಂಬಾಕು ಮಾರಾಟದ ಅಂಗಡಿ, ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ದಾಳಿ ನಡೆಸಿ ೩೬ ಪ್ರಕರಣಗಳನ್ನು ದಾಖಲಿಸಿ, ರೂ. ೫೬೦೦ ದಂಡ ವಸೂಲಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾದ್ಯಾಯ, ಹಿರಿಯ ಆಹಾರ ಸುರಕ್ಷಾಧಿಕಾರಿ ಕೆ.ಎಸ್. ವೆಂಕಟೇಶ್, ಹಿರಿಯ ಆರೋಗ್ಯ ನಿರೀಕ್ಷಾಣಾಧಿಕಾರಿ ದೇವಪ್ಪ ಪಟಗಾರ್ ಮತ್ತು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಕಛೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಗದಿಶ್ ರಾವ್, ನಗರ ಪೋಲಿಸ್ ಠಾಣೆಯ ಪಿ.ಸಿ ಹೇಮಂತ್ ಕುಮಾರ್, ಉಡುಪಿ ನಗರಸಭೆ ಅಧಿಕಾರಿ ಹರೀಶ್ ಮತ್ತು ಸುರೇಂದ್ರ ಉಪಸ್ಥಿತರಿದ್ದರು.