×
Ad

2020-21 ಹಣಕಾಸು ವರ್ಷದಲ್ಲಿ ಬಿಜೆಪಿಯಿಂದ 477 ಕೋ. ರೂ.ಗೂ ಅಧಿಕ ದೇಣಿಗೆ ಸ್ವೀಕಾರ

Update: 2022-05-31 23:17 IST

ಹೊಸದಿಲ್ಲಿ, ಮೇ 31: 2020-21ನೇ ಹಣಕಾಸು ವರ್ಷದಲ್ಲಿ ಬಿಜೆಪಿ 477.5 ಕೋ. ರೂ.ಗೂ ಅಧಿಕ ದೇಣಿಗೆ ಸ್ವೀಕರಿಸಿದೆ. ಕಾಂಗ್ರೆಸ್ 74.50 ಕೋ. ರೂ.ಗೂ ಅಧಿಕ ದೇಣಿಗೆ ಸ್ವೀಕರಿಸಿದೆ. ಇದು ಬಿಜೆಪಿ ಸ್ವೀಕರಿಸಿದ ದೇಣಿಗೆಯ ಕೇವಲ ಶೇ. 15. ಚುನಾವಣಾ ಆಯೋಗ ಮಂಗಳವಾರ ಸಾರ್ವಜನಿಕ ವಲಯದಲ್ಲಿ ಬಿಡುಗಡೆ ಮಾಡಿದ ಉಭಯ ಪಕ್ಷಗಳ ದೇಣಿಗೆ ವರದಿಯ ಪ್ರಕಾರ ಬಿಜೆಪಿ ವಿವಿಧ ಸಂಸ್ಥೆಗಳು, ಚುನಾವಣಾ ಟ್ರಸ್ಟ್ಗಳು ಹಾಗೂ ವ್ಯಕ್ತಿಗಳಿಂದ 4,77,54,50,077 ರೂ. ಸ್ವೀಕರಿಸಿದೆ.

2020-21 ಹಣಕಾಸು ವರ್ಷದ ದೇಣಿಗೆ ವರದಿಯನ್ನು ಪಕ್ಷಗಳು ಈ ವರ್ಷ ಮಾರ್ಚ್ 14ರಂದು ಚುನಾವಣಾ ಆಯೋಗದ ಮುಂದೆ ಸಲ್ಲಿಸಿವೆ. ಕಾಂಗ್ರೆಸ್ನ ದೇಣಿಗೆ ವರದಿಯ ಪ್ರಕಾರ ಅದು ವಿವಿಧ ಸಂಸ್ಥೆಗಳು ಹಾಗೂ ವ್ಯಕ್ತಿಗಳಿಂದ 74,50,49,731 ರೂ. ಸ್ವೀಕರಿಸಿದೆ.

ಚುನಾವಣಾ ಕಾನೂನಿನ ನಿಯಮದ ಪ್ರಕಾರ 20 ಸಾವಿರ ರೂ.ಗಿಂತ ಹೆಚ್ಚು ಹಣ ಸ್ವೀಕರಿಸಿದ ಪಕ್ಷಗಳು ಚುನಾವಣಾ ಆಯೋಗಕ್ಕೆ ದೇಣಿಗೆ ವರದಿ ಸಲ್ಲಿಸಬೇಕು.
ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎಯನ್ನು ಬಿಜೆಪಿ 2014ರಲ್ಲಿ ಕೆಳಗಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News