ಸುರತ್ಕಲ್ ಪಾಲಿಕೆ ಕಚೇರಿಗೆ ಶಾಸಕ ಡಾ.ಭರತ್ ಶೆಟ್ಟಿ ದಿಢೀರ್ ಭೇಟಿ: ಅಧಿಕಾರಿ, ಸಿಬ್ಬಂದಿಗೆ ತರಾಟೆ
Update: 2022-06-01 15:29 IST
ಸುರತ್ಕಲ್ : ಸುರತ್ಕಲ್ ಮಹಾನಗರ ಪಾಲಿಕೆ ಕಚೇರಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಬುಧವಾರ ದಿಢೀರ್ ಭೇಟಿ ನೀಡಿ ಅಧಿಕಾರಿ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರ ಹಾಜರಾತಿ ಪರಿಶೀಲನೆ ನಡೆಸಿದರು.
ಶಾಸಕರು ಭೇಟಿ ನೀಡಿದ ವೇಳೆ ಸುರತ್ಕಲ್ ವಲಯ ಅಧಿಕಾರಿಯೇ ಬಂದಿರಲಿಲ್ಲ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ವಿವಿಧ ಸೌಲಭ್ಯ ಕಲ್ಪಿಸುವ ಸರ್ವರ್ ಸಮಸ್ಯೆ ಹಾಗೂ ಸಿಬ್ಬಂದಿಗೆ ಸರಿಯಾಗಿ ಆಸ್ತಿ ತೆರಿಗೆ , ಟ್ರೇಡ್ ಲೈಸೆನ್ಸ್ ವಿವರ ಬರೆಯುವಲ್ಲಿ ತಪ್ಪುಗಳಾಗುವ ಕಾರಣ ಮತ್ತಷ್ಟು ವಿಳಂಬ ಆಗುತ್ತಿರುವ ಬಗ್ಗೆ ಸ್ಥಳದಲ್ಲಿದ್ದ ಸಾರ್ವಜನಿಕರೊಂದಿಗೆ ಮಾಹಿತಿ ಪಡೆದುಕೊಂಡಶಾಸಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದು ಕೊಂಡರು.
ಬಳಿಕ ಆಯುಕ್ತರ ಜತೆ ಚರ್ಚಿಸಿದ ಶಾಸಕರು, ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದರು.
ಮನಪಾ ಉಪ ಕಚೇರಿ ಭೇಟಿಯ ಸಂದರ್ಸಭ ಪ್ರಶಾಂತ್ ಮೂಡಾಯಿ ಕೋಡಿ, ವರುಣ್ ಚೌಟ, ದಿನಕರ್ ಇಡ್ಯಾ, ಪುಷ್ಪರಾಜ್ ಕಡಂಬೋಡಿ, ರಾಘವೇಂದ್ರ ಶೆಣೈ ಮತ್ತಿತರರು ಉಪಸ್ಥಿತರಿದ್ದರು.