ತೈವಾನ್ ಸುತ್ತಮುತ್ತ ಯುದ್ಧ ಸನ್ನಧ್ಥತೆ ಗಸ್ತು ನಡೆಸಿದ ಚೀನಾ
Update: 2022-06-01 23:20 IST
ಬೀಜಿಂಗ್, ಜೂ.1: ತೈವಾನ್ ಸುತ್ತಮುತ್ತ ಸಮುದ್ರ ಹಾಗೂ ವಾಯುಕ್ಷೇತ್ರದಲ್ಲಿ ಯುದ್ಧಸನ್ನದ್ಧತೆ ಗಸ್ತು ನಡೆಸಲಾಗಿದೆ ಎಂದು ಚೀನಾದ ಸೇನೆ ಬುಧವಾರ ಹೇಳಿದೆ. ಅಮೆರಿಕ-ತೈವಾನ್ ಒಕ್ಕೂಟದ ವಿರುದ್ಧ ಇಂತಹ ಕ್ರಮಗಳು ಅತ್ಯಗತ್ಯವಾಗಿದೆ. ಇತ್ತೀಚೆಗೆ ಅಮೆರಿಕವು ಹಲವು ಬಾರಿ ತೈವಾನ್ ವಿಷಯದಲ್ಲಿ ಮಧ್ಯಪ್ರವೇಶಿಸಿದ್ದು ತೈವಾನ್ ಸ್ವಾತಂತ್ರ್ಯ ಪಡೆಗಳಿಗೆ ಬೆಂಬಲವನ್ನು ಪ್ರಚೋದಿಸಿದೆ. ಇದು ತೈವಾನ್ ಅನ್ನು ಅತ್ಯಂತ ಅಪಾಯಕಾರಿ ಪರಿಸ್ಥಿತಿಗೆ ತಳ್ಳಬಹುದು ಎಂದು ಚೀನಾ ಸೇನೆಯ ಪೂರ್ವ ರೆಜಿಮೆಂಟ್‌ನ ಹೇಳಿಕೆ ತಿಳಿಸಿದೆ.
ದೇಶದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ದೃಢವಾಗಿ ರಕ್ಷಿಸಲು ಚೀನಾ ಬಲವಾದ ಕ್ರಮಗಳನ್ನು ಕೈಗೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಝಾವೊ ಲಿಜಿಯನ್ ಹೇಳಿದ್ದಾರೆ.