ಕುದುರೆ, ಆನೆ, ಸಂಗೀತ ಬ್ಯಾಂಡ್‌ಗಳ ಮೇಳದೊಂದಿಗೆ ನಿವೃತ್ತಿ ದಿನವನ್ನು ವಿಭಿನ್ನವಾಗಿ ಆಚರಿಸಿದ ಪೌರ ಕಾರ್ಮಿಕ
ಪಾಟ್ನಾ: ಬಿಹಾರ ರಾಜ್ಯ ಪುಲ್ ನಿರ್ಮಾಣ್ ನಿಗಮ್ ಲಿಮಿಟೆಡ್‌ನಲ್ಲಿ ಸೇವೆ ಸಲ್ಲಿಸಿದ ಪೌರ ಕಾರ್ಮಿಕರೊಬ್ಬರು ತಮ್ಮ ನಿವೃತ್ತಿಯನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಪಾಲಿಕೆಯಲ್ಲಿ ಕಳೆದ 40 ವರ್ಷಗಳಿಂದ ಸೇವೆಯಲ್ಲಿದ್ದ ರಾಮ್ ಬಾಬು ಅವರು ತಮ್ಮ ಸೇವೆಯ ಕೊನೆಯ ದಿನವು ಸ್ಮರಣೀಯವಾಗಿರಬೇಕೆಂದು ಅದ್ದೂರಿಯಾಗಿ ಆಚರಿಸಿದ್ದಾರೆ.
ಮಂಗಳವಾರ, ಅವರು ತಮ್ಮ ನಿವೃತ್ತಿಯ ದಿನವನ್ನು ಮದುವೆಯ ದಿನದಂತೆಯೇ ಅದ್ಧೂರಿಯಾಗಿ ಸಂಭ್ರಮಿಸಿದ್ದು, ಕುದುರೆಯ ಮೇಲೆ ಏರಿ ಸವಾರಿ ಮಾಡಿದ್ದಾರೆ. ಮಾತ್ರವಲ್ಲ, ಈ ಸಂದರ್ಭವನ್ನು ಆಚರಿಸಲು ಸಂಗೀತ ಬ್ಯಾಂಡ್ ಅನ್ನು ಸಹ ಏರ್ಪಡಿಸಿದ್ದರು. ಕುದುರೆಗಳು, ಆನೆಗಳು, ಬ್ಯಾಂಡ್‌ಗಳು, ಆರ್ಕೆಸ್ಟ್ರಾಗಳು, ಎಲ್ಲವನ್ನೂ ಬಾಬು ಅವರೇ ಆಯೋಜಿಸಿದ್ದು, ಅವರೇ ಅದರ ಬಾಡಿಗೆ ಪಾವತಿಸಿದ್ದಾರೆ.
“40 ವರ್ಷಗಳ ಕಾಲ ಕೆಲಸ ಮಾಡಿದ ನಂತರ ನಿವೃತ್ತಿಯಾಗುತ್ತಿದ್ದೇನೆ, ನನ್ನ ಕೊನೆಯ ದಿನವನ್ನು ಯಾವಾಗಲೂ ಸ್ಮರಣೀಯವಾಗಿಸಲು ಬಯಸುತ್ತೇನೆ. ಈಗ ಅಂತಿಮವಾಗಿ ಆ ದಿನ ಬಂದಿತು, ನಾನು ಈ ಸಂಭ್ರಮದ ಆಚರಣೆಯನ್ನು ಏರ್ಪಡಿಸಿದೆ.” ಎಂದು ಅವರು ಹೇಳಿರುವುದಾಗಿ indiatoday.in ವರದಿ ಮಾಡಿದೆ.