×
Ad

ಉಪ್ಪಿನಂಗಡಿ: ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು

Update: 2022-06-02 13:53 IST

ಉಪ್ಪಿನಂಗಡಿ, ಜೂ.2: ಇಲ್ಲಿನ ಪ್ರಥಮ ದರ್ಜೆ ಸರಕಾರಿ ಕಾಲೇಜಿನಲ್ಲಿ ಹಿಜಾಬ್ ಧಾರಣೆಗೆ ಸಂಬಂಧಿಸಿದ ವಿವಾದ ತಾರಕಕ್ಕೇರಿದ್ದು, ಗುರುವಾರ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದರು. ಈ ವಿವಾದದ ಬಗ್ಗೆ ವರದಿ ಮಾಡಲು ತೆರಳಿದ್ದ ಮಾಧ್ಯಮದವರ ಮೇಲೆ ವಿದ್ಯಾರ್ಥಿಗಳ ಗುಂಪು ಹಲ್ಲೆಗೆ ಮುಂದಾದ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಕಾಲೇಜಿನಲ್ಲಿ ಹಿಜಾಬ್ ಕುರಿತಾಗಿ ಮೃದು ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಕೆಲವು ವಿದ್ಯಾರ್ಥಿಗಳು ಗುರುವಾರ ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದಿದ್ದರು. ಈ ವಿದ್ಯಾರ್ಥಿಗಳು ಕಾಲೇಜು ವರಾಂಡದಲ್ಲಿ ನಿಂತಿದ್ದರು. ಇದೇವೇಳೆ ಹಿಜಾಬ್ ಪರವಾದ ವಿದ್ಯಾರ್ಥಿಗಳು ಕೂಡಾ ಗುಂಪಾಗಿ ಅಲ್ಲೇ ಜಮಾಯಿಸಿದ್ದರು. ಸುದ್ದಿ ತಿಳಿದ ಮಾಧ್ಯಮದವರು ಕಾಲೇಜಿಗೆ ತೆರಳಿದ್ದು, ಈ ವೇಳೆ ವಿದ್ಯಾರ್ಥಿಗಳ ಗುಂಪು ವರದಿಗಾರಿಕೆಗೆ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಮಾಧ್ಯಮದವರ ಮೇಲೆ ಹಲ್ಲೆಗೆ ಮುಂದಾಗಿದೆ. ಕಾಲೇಜಿನ ಕಚೇರಿಯ ಕೊಠಡಿಯಲ್ಲಿ ಮಾಧ್ಯಮದವರಿಗೆ ದಿಗ್ಬಂಧನ ವಿಧಿಸಿ ವರದಿಗಾಗಿ ತೆಗೆಯಲಾಗಿದ್ದ ವಿಡಿಯೊವನ್ನು ಒತ್ತಾಯಪೂರ್ವಕವಾಗಿ ಡಿಲೀಟ್ ಮಾಡಿಸಿ, ಬೆದರಿಕೆ ಹಾಕಿದೆ ಎಂಬ ಆರೋಪ ಕೇಳಿಬಂದಿದೆ.

ಈ ಘಟನೆ ಬಗ್ಗೆ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದರೂ ಪೊಲೀಸರು ಸ್ಥಳಕ್ಕೆ ಆಗಮಿಸದೆ ಮೌನವಾಗಿದ್ದರು ಎಂದು ಮಾಧ್ಯಮದವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News