ಜೂ.7ರಂದು ಮಾಹಿತಿ ಹಕ್ಕು ಕಾರ್ಯಕರ್ತರ ಸಮಾವೇಶ
Update: 2022-06-03 19:12 IST
ಬೈಂದೂರು : ಬೈಂದೂರು ತಾಲೂಕು ವ್ಯಾಪ್ತಿಯ ಸಾಮಾಜಿಕ ಕಳಕಳಿ ಹೊಂದಿ, ಸಾರ್ವಜನಿಕ ಸೇವಾ ಕಾರ್ಯ ದಲ್ಲಿ ತೊಡಗುವ ಆಸಕ್ತಿ ಹೊಂದಿರುವ ಮಾಹಿತಿ ಹಕ್ಕಿನ ಕಾರ್ಯಕರ್ತರ ಸಮಾವೇಶವನ್ನು ಜೂ.೭ರಂದು ಸಂಜೆ ೪ ಗಂಟೆಗೆ ಬೈಂದೂರಿನ ಬಂಕೇಶ್ವರ ರಸ್ತೆಯ ಮಹಾಕಾಳಿ ದೇವಸ್ಥಾನದ ಸಭಾಂಗಣ ದಲ್ಲಿ ಏರ್ಪಡಿಸಲಾಗಿದೆ.
ಈ ಸಭೆಯಲ್ಲಿ ಜಿಲ್ಲೆಯ ಮಾಹಿತಿ ಹಕ್ಕಿನ ಸಂಘಟನೆಯ ಜಿಲ್ಲಾ ಮುಖಂಡರು ಅತಿಥಿಗಳಾಗಿ ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ಸಂಘಟಕ ವೆಂಕಟೇಶ್ ಕೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.