ಯೆನಪೋಯ: ವಿಶ್ವ ತಂಬಾಕು ರಹಿತ ದಿನಾಚರಣೆ

Update: 2022-06-03 15:07 GMT

ಕೊಣಾಜೆ: ಯೆನೆಪೋಯ ನರ್ಸಿಂಗ್ ಕಾಲೇಜಿನ ಎನ್ ಎಸ್ ಎಸ್ ಘಟಕ, ಸಮುದಾಯ  ಆರೋಗ್ಯ ಶುಶ್ರುಷ ವಿಭಾಗ ಹಾಗೂ ಮಾದಕ ವ್ಯಸನ ತಡೆಗಟ್ಟುವ ಕೇಂದ್ರ-ಸ್ಯಾಟಲೈಟ್ ಘಟಕ ಇವರು ದಕ್ಷಿಣ ಕನ್ನಡ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದೊಂದಿಗೆ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು  ಬಿಜೈ ಬಸ್ ನಿಲ್ದಾಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಲಾಲ್ ಬಾಗ್ ವೃತ್ತದಿಂದ ಬಿಜೈ ಬಸ್ ನಿಲ್ದಾಣದವರೆಗೆ ಜಾಗೃತಿ ಜಾಥಾವನ್ನು ತಂಬಾಕು ವ್ಯಸನ ವಿರೋಧಿ ಘೋಷಣೆಯೊಂದಿಗೆ ನಡೆಸಲಾಯಿತು. ನಂತರ ನಡೆದ ಸಭಾಕಾರ್ಯಕ್ರಮವನ್ನು ಗಣ್ಯರು ಕೃತಕ ಸಿಗರೇಟ್ ಮಾದರಿಯನ್ನು ತುಂಡರಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಜ್ಯೋತಿ ಮಾತನಾಡಿ, ತಂಬಾಕು ಮುಕ್ತ ಜೀವನವು ಕ್ಯಾನ್ಸರ್ ಮುಕ್ತ ಜೀವನಕ್ಕೆ ದಾರಿ, ಇದರಿಂದ ಎಲ್ಲರಿಗೂ ಆರೋಗ್ಯ ಎಂದು ಹೇಳಿದರು.

ಜಿಲ್ಲಾ ತಂಬಾಕು ತಡೆಗಟ್ಟುವ ಕೋಶ ಇದರ ಶೃತಿ ಸಾಲ್ಯಾನ್  ಇವರು ತಂಬಾಕು ಬೆಳೆಸುವುದರಿಂದ ಬಿಸಾಡು ವವರೆಗೂ ಹಲವು ತ್ಯಾಜ್ಯವನ್ನು ಪರಿಸರಕ್ಕೆ ಕೊಡುತ್ತಿದೆ, ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಆದ್ದರಿಂದ ಯುವ ಜನತೆಯಲ್ಲಿ ಈ ಬಗ್ಗೆ ಅರಿವು ಮೂಡಿಸುವುದು ಮುಖ್ಯವಾಗಿದೆ ಎಂದು ಹೇಳಿದರು.

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಡಿಪೋ ಮ್ಯಾನೇಜರ್ ಕಮಲ್ ಕುಮಾರ್, ಕಾರ್ಯಕ್ರಮ ಅಭಿವೃದ್ಧಿ ಅಧಿಕಾರಿ ಪ್ರಿಯಾ ಪವನ್ ಕುಮಾರ್ ಉಪಸ್ಥಿತರಿದ್ದರು.

ಯೆನೆಪೋಯ ಶುಶ್ರುಷ ಕಾಲೇಜು ಉಪಪ್ರಾಂಶುಪಾಲರು ಜಾನೆಟ್ ಮಿರಾಂಡಾ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ರೆನಿಟಾ ಪ್ರಿಯ ಡಿ ಸೋಜಾ ಸ್ವಾಗತಿಸಿದರು. ಆನಂದ ವಂದಿಸಿದರು,  ಮೇಘಶ್ರೀ ಕಾರ್ಯಕ್ರಮವನ್ನು  ನಿರೂಪಿಸಿದರು. ತಂಬಾಕು ನಿಷೇಧ ಕುರಿತಾದ ರೂಪಕವನ್ನು ಯೆನೆಪೋಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News