ಮಂಗಳೂರು: ಅವೈಜ್ಞಾನಿಕ ಸರ್ಕಲ್‌ಗಳ ತೆರವಿಗೆ ಒತ್ತಾಯ; ಶ್ವೇತ ಪತ್ರ ಬಿಡುಗಡೆಗೆ ಐವನ್ ಡಿಸೋಜಾ ಆಗ್ರಹ
ಮಂಗಳೂರು : ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅವೈಜ್ಞಾನಿಕ ಕಾಮಗಾರಿಗಳ ಜತೆ ಸಾರ್ವಜನಿಕರ ಹಣ ಪೋಲು ಮಾಡಲಾಗುತ್ತಿದೆ. ನಗರ ಸೌಂದರ್ಯದ ನೆಪದಲ್ಲಿ ಖರ್ಚು ಮಾಡಿದ ಹಣದ ಬಗ್ಗೆ ಪಾಲಿಕೆ ಶ್ವೇತ ಪತ್ರ(ವೈಟ್ ಪೇಪರ್) ಬಿಡುಗಡೆ ಮಾಡಬೇಕೆಂದು ಮಾಜಿ ಶಾಸಕ ಐವನ್ ಡಿ ಸೋಜಾ ಒತ್ತಾಯಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಸ್ಟೇಟ್‌ಬ್ಯಾಂಕಿನ ಬಳಿ ಅನಗತ್ಯ ರಸ್ತೆಗಳ ವಿಭಾಜಕ ಮತ್ತು ರಸ್ತೆ ಮಧ್ಯೆ ಪಾರ್ಕುಗಳ ರಚನೆ ಬಗ್ಗೆ ಅನೇಕ ಸಾರ್ವಜನಿಕರಿಂದ ದೂರು ಬಂದಿರುವ ಬಗ್ಗೆ ಇಂದು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಈ ವರದಿಯ ಹಿನ್ನೆಲೆಯಲ್ಲಿ ಐವನ್ ಡಿ ಸೋಜರವರ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಜನರ ಅಭಿಪ್ರಾಯ ಪಡೆದುಕೊಂಡಿತು.
ಈ ಸಂಬಂಧ ಸ್ಥಳೀಯ ಪೋಲಿಸ್ ಅಧಿಕಾರಿಗಳಿಗೆ ಅನಧಿಕೃತವಾಗಿ ಮತ್ತುುತಿ ವಾಹನ ಅಪಘಾತಗಳಿಗೆ ಆಹ್ವಾನ ನೀಡುವ ರೀತಿಯಲ್ಲಿ ರಸ್ತೆಗಳ ಅಭಿವೃದ್ಧಿ ಮತ್ತು ೩ ತಿಂಗಳ ಹಿಂದೆ ನಿರ್ಮಾಣವಾದ ರಸ್ತೆ ಅಗೆದು ಪುನಃ ರಸ್ತೆ ನಿರ್ಮಾಣ ಮಾಡುವ ಬಗ್ಗೆ, ಜ್ಯೋತಿ ಕಾಲೇಜಿನ ಬಳಿ ನಡೆಯುವ ಕಾಮಾಗಾರಿ ಬಗ್ಗೆ ತೀವ್ರ ಅಸಮಾಧನ ವ್ಯಕ್ತಪಡಿಸಿದರು.
ಪಳ್ನೀರ್ - ವೆಲೆನ್ಸಿಯಾ ರಸ್ತೆ(ಬಲ್ಮಠ) ಮತ್ತು ವರ್ಷಪೂರ್ತಿ ರಸ್ತೆ ಅಗೆದುಹಾಕುವ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿಗಳಲ್ಲ್ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದವರು ಹೇಳಿದರು. ಸ್ಮಾರ್ಟ್ ಸಿಟಿ ಬಗ್ಗೆ ಪೋಲಿಸ್ ವರಿಷ್ಠಾಧಿಕಾರಿ, ಮ.ಮ.ನಗರ ಪಾಲಿಕೆಯ ಕಮಿಷನರ್ ಮತ್ತು ಜಿಲ್ಲಾಧಿಕಾರಿಗೆ ಸಂಪರ್ಕಿಸಿ ಮಾತುಕತೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪ್ರಾದ್ಯ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಶಿತ್ ಜಿ.ಪಿರೇರಾ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಅತ್ತಾವರ, ಯುವ ಕಾಂಗ್ರೆಸ್ ನಾಯಕ ಹಸನ್ ಪಳ್ನೀರ್, ರಮಾನಂದ ಪೂಜಾರಿ, ಸೌಹಾನ್ ಮಂಗಳಾದೇವಿ, ಸಿ.ಎಂ.ಮುಸ್ತಫ, ಸತೀಶ್ ಪೆಂಗಲ್, ಸಲೀಂ ಮುಕ್ಕ, ಇಮ್ರಾನ್, ಪ್ರೇಮ್ ಬಲ್ಲಾಲ್ ಬಾಗ್, ಅಬಿಬುಲ್ಲ, ವಿಕ್ಟೋರಿಯಾ ಹಾಗು ಇತರರು ಉಪಸ್ಥಿತರಿದ್ದರು.