×
Ad

​ಐಕಾನಿಕ್ ವೀಕ್ ಸೆಲೆಬ್ರೇಷನ್ : ಉಡುಪಿಯಲ್ಲಿ ನೇರ ಪ್ರಸಾರ

Update: 2022-06-04 20:58 IST

ಉಡುಪಿ: ಆಜಾದಿ ಕಾ ಅಮೃತ್ ಮಹೋತ್ಸವ ಐಕಾನಿಕ್ ವೀಕ್ ಸೆಲೆಬ್ರೇಷನ್ ಕಾರ್ಯಕ್ರಮದ ಉದ್ಘಾಟನೆ ಯನ್ನು ಪ್ರಧಾನ ಮಂತ್ರಿಗಳು ಜೂ.೬ ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಮಾಡಲಿದ್ದು, ಇದರ ಕರ್ನಾಟಕ ರಾಜ್ಯ ಮಟ್ಟದ ನೇರ ಪ್ರಸಾರವು ಉಡುಪಿಯಲ್ಲಿ ನಡೆಯಲಿದೆ.

ಕೇಂದ್ರ ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ವತಿಯಿಂದ ನಡೆಯು ತ್ತಿರುವ ಈ ಕಾರ್ಯಕ್ರಮವನ್ನು ಭಾರತದಾ ದ್ಯಂತ ೭೫ ಜಿಲ್ಲೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದ್ದು ಉಡುಪಿ ಕರ್ನಾಟಕದ ಏಕೈಕ ಜಿಲ್ಲೆ ಆಗಿದೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ಬ್ಯಾಂಕ್‌ಗಳ ಗ್ರಾಹಕರು, ಬ್ಯಾಂಕ್ ಅಧಿಕಾರಿಗಳು, ಸಾರ್ವಜನಿಕ ವಿಮಾ ಕಂಪನಿಗಳ ಅಧಿಕಾರಿಗಳು ಮತ್ತು ಕೇಂದ್ರ ಸರಕಾರದ ಇಲಾಖೆಗಳ ಅಧಿಕಾರಿಗಳು ಒಳಗೊಳ್ಳುವ ಮೂಲಕ ಐದು ನೂರಕ್ಕೂ ಹೆಚ್ಚಿನ ಸಾರ್ವಜನಿಕರು ಭಾಗವಹಿಸಲಿರುವರು.

ನೇರಪ್ರಸಾರ ಕಾರ್ಯಕ್ರಮವನ್ನು ಜೂ.೬ರಂದು ಬೆಳಗ್ಗೆ ೯.೩೦ಕ್ಕೆ  ಮಣಿಪಾಲ ಕೆನರಾ ಬ್ಯಾಂಕಿನ ಸಿಂಡಿಕೇಟ್ ಗೋಲ್ಡನ್ ಜ್ಯೂಬಿಲಿ ಹಾಲ್‌ನಲ್ಲಿ ಆಯೋಜಿಸ ಲಾಗಿದೆ ಎಂದು ಲೀಡ್ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News