×
Ad

ಉಡುಪಿ: ಶನಿವಾರ ನಾಲ್ವರಲ್ಲಿ ಕೋವಿಡ್ ಸೋಂಕು ಪತ್ತೆ

Update: 2022-06-04 21:29 IST

ಉಡುಪಿ : ಜಿಲ್ಲೆಯಲ್ಲಿ ಮಾರ್ಚ್ ೧೭ರ ನಂತರ ಮೊದಲ ಬಾರಿಗೆ ನಾಲ್ವರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ  ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಆರಕ್ಕೇರಿವೆ.

ಶನಿವಾರ ಜಿಲ್ಲೆಯಲ್ಲಿ ಇಬ್ಬರು ಪುರುಷ ಹಾಗೂ ಇಬ್ಬರು ಮಹಿಳೆಯರು  ಕೋವಿಡ್‌ಗೆ ಪಾಸಿಟಿವ್ ಬಂದಿದ್ದಾರೆ. ಇದರಿಂದ ಜಿಲ್ಲೆಯಲ್ಲೀಗ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಕೋವಿಡ್ ಸೋಂಕಿಗಾಗಿ ತಮ್ಮ ತಮ್ಮ ಮನೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಪಾಸಿಟಿವ್ ಬಂದ ನಾಲ್ವರು ಉಡುಪಿ ತಾಲೂಕಿನವರು. 

ಜಿಲ್ಲೆಯಲ್ಲಿ ಇಂದು ಒಟ್ಟು ೧೫೩ ಮಂದಿಯನ್ನು ಕೋವಿಡ್ ಪರೀಕ್ಷೆ ಗೊಳಪಡಿಸಲಾಗಿದ್ದು, ಉಡುಪಿ ತಾಲೂಕಿನ ೧೦೬ ಮಂದಿಯಲ್ಲಿ ನಾಲ್ವರು ಹಾಗೂ ಕುಂದಾಪುರ ತಾಲೂಕಿನ ೩೫ ಮಂದಿಯಲ್ಲಿ ಹಾಗೂ ಕಾರ್ಕಳ ತಾಲೂಕಿನ ೧೨ ಮಂದಿಯಲ್ಲಿ ಸೋಂಕು ಕಂಡುಬಂದಿಲ್ಲ. 

೭೮೦ ಮಕ್ಕಳಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು ೧೧೭೫ ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ ೭೮೦ ಮಂದಿ ೧೨ರಿಂದ ೧೪ ವರ್ಷದೊಳಗಿನ ಮಕ್ಕಳೂ ಸೇರಿದ್ದಾರೆ. ೧೩೯ ಮಕ್ಕಳಿಗೆ ಮೊದಲ ಡೋಸ್ ನೀಡಿದ್ದರೆ, ೬೪೧ ಮಂದಿ ಮಕ್ಕಳು ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯ ೩೨,೬೬೬ ಮಂದಿ ಮಕ್ಕಳು ಮೊದಲ ಡೋಸ್ ಹಾಗೂ ೨೪,೪೬೬ ಮಂದಿ ಎರಡನೇ ಡೋಸ್ ಪಡೆದಿದ್ದಾರೆ.

೧೫ರಿಂದ ೧೮ ವರ್ಷದೊಳಗಿನ ಒಬ್ಬರಿಗೆ ಮೊದಲ ಡೋಸ್ ಹಾಗೂ ೧೯ ಮಂದಿಗೆ ಎರಡನೇ ಡೋಸ್ ನೀಡಲಾಗಿದೆ. ಒಟ್ಟಾರೆಯಾಗಿ ಇಂದು ೧೪೮ ಮಂದಿಗೆ ಮೊದಲ ಡೋಸ್, ೭೮೫ ಮಂದಿ ಎರಡನೇ ಡೋಸ್ ಹಾಗೂ ೨೪೨ ಮಂದಿಗೆ ಎಚ್ಚರಿಕೆಯ ಡೋಸ್‌ನ್ನು ನೀಡಲಾಗಿದೆ.

ಜಿಲ್ಲೆಯಲ್ಲಿ ೬೦ ವರ್ಷ ಮೇಲಿನ ೨೦೦ ಮಂದಿ ಎಚ್ಚರಿಕೆ ಡೋಸ್ ಪಡೆದಿದ್ದು, ಈವರೆಗೆ ಒಟ್ಟಾರೆಯಾಗಿ ಒಟ್ಟು ೫೪,೪೦೭ ಮಂದಿ ಮುನ್ನೆಚ್ಚರಿಕೆ ಡೋಸ್ ಪಡೆದಿದ್ದು, ಎಲ್ಲರೂ ಸೇರಿ ಒಟ್ಟು ೭೩,೩೩೭ ಮಂದಿ ಇಂದಿನವರೆಗೆ ಈ ಲಸಿಕೆ ಯನ್ನು ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News