×
Ad

ಮಂಗಳೂರು : ಚಾರ್ಜ್‌ಗೆ ಇಟ್ಟಿದ್ದ ಇಲೆಕ್ಟ್ರಿಕಲ್ ಸ್ಕೂಟರ್‌ಗೆ ಬೆಂಕಿ

Update: 2022-06-05 15:41 IST

ಮಂಗಳೂರು : ನಗರದ ಬೋಂದೆಲ್ ಸಮೀಪದ ಕೆ.ಎಚ್. ಕಾಲನಿಯಲ್ಲಿ ಚಾರ್ಜ್‌ಗೆ ಇಟ್ಟಿದ್ದ ಇಲೆಕ್ಟ್ರಿಕಲ್ ಸ್ಕೂಟರ್ ಬೆಂಕಿ ಆಕಸ್ಮಿಕಕ್ಕೊಳಗಾಗಿ ಸುಟ್ಟು ಕರಕಲಾದ ಘಟನೆ ರವಿವಾರ ವರದಿಯಾಗಿದೆ.

ಈ ಇಲೆಕ್ಟ್ರಿಕಲ್ ಸ್ಕೂಟರ್ ಚಾರ್ಜ್‌ಗೆ ಇಟ್ಟ ಕೆಲವು ಗಂಟೆಯ ಬಳಿಕ ಬೆಂಕಿ ಆಕಸ್ಮಿಕಕ್ಕೊಳಗಾಗಿ ಸ್ಫೋಟಿಸಿತು ಎಂದು ತಿಳಿದುಬಂದಿದೆ.

ಸ್ಕೂಟರ್‌ನ ಯಂತ್ರಗಳು ಸಂಪೂರ್ಣ ಸುಟ್ಟು ಹೋಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗವು ಭೇಟಿ ನೀಡಿ ಹೆಚ್ಚಿನ ಅನಾಹುತ ತಪ್ಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News