×
Ad

1 ಮಿಲಿಯನ್ ಕಾರುಗಳನ್ನು ಹಿಂದಕ್ಕೆ ಪಡೆದ ಮರ್ಸಿಡಿಸ್: ಕಾರಣವೇನು ಗೊತ್ತೇ?

Update: 2022-06-05 22:03 IST

ಬರ್ಲಿನ್, ಜೂ.5: ಬ್ರೇಕಿಂಗ್ ವ್ಯವಸ್ಥೆಯಲ್ಲಿ ಸಮಸ್ಯೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಮರ್ಸಿಡಿಸ್-ಬೆಂಝ್‌ ನ ಹಳೆಯ ಮಾಡೆಲ್ ನ ಸುಮಾರು 1 ಮಿಲಿಯನ್ ಕಾರುಗಳನ್ನು ವಿಶ್ವದಾದ್ಯಂತ ಹಿಂಪಡೆಯಲಾಗುವುದು ಎಂದು ಜರ್ಮನಿಯ ಕಾರು ಉತ್ಪಾದನಾ ಸಂಸ್ಥೆ ಫೆಡರಲ್ ಟ್ರಾನ್ಸ್‌ಪೋರ್ಟ್ ಅಥಾರಿಟಿ ಹೇಳಿದೆ.

2004ರಿಂದ 2015ರ ಅವಧಿಯಲ್ಲಿ ತಯಾರಿಸಲಾದ ಎಸ್ಯುವಿ ಸರಣಿಯ ಎಂಎಲ್ ಮತ್ತು ಜಿಎಲ್ ಹಾಗೂ ಆರ್-ವರ್ಗದ ಐಷಾರಾಮಿ ಮಿನಿವ್ಯಾನ್ ಗಳಿಗೆ ಈ ನಿರ್ಧಾರ ಅನ್ವಯಿಸಲಿದೆ, ಬ್ರೇಕ್ ಬೂಸ್ಟರ್ ನಲ್ಲಿ ತುಕ್ಕು ಹಿಡಿದು ಕೆಟ್ಟ ಘಳಿಗೆಯಲ್ಲಿ ಬ್ರೇಕ್ ಪೆಡಲ್ ಮತ್ತು ಬ್ರೇಕ್ ವ್ಯವಸ್ಥೆಯ ನಡುವಿನ ಸಂಪರ್ಕಕ್ಕೆ ಅಡ್ಡಿಯಾಗಬಹುದು. ಪರಿಣಾಮವಾಗಿ ಬ್ರೇಕ್ ಕಾರ್ಯನಿರ್ವಹಿಸದೆ ಇರಬಹುದು . ಈ ಕಾರಣದಿಂದ ವಿಶ್ವದಾದ್ಯಂತ 9,93,407 ವಾಹನಗಳನ್ನು, ಜರ್ಮನಿಯಲ್ಲೇ 70,000 ವಾಹನಗಳು, ಹಿಂದಕ್ಕೆ ಪಡೆಯಲಾಗುವುದು ಎಂದು ಸಂಸ್ಥೆ ಹೇಳಿದೆ.

ಹಿಂಪಡೆಯುವ ಪ್ರಕ್ರಿಯೆ ತಕ್ಷಣದಿಂದಲೇ ಆರಂಭವಾಗಲಿದ್ದು ಸಂಭಾವ್ಯ ಸಮಸ್ಯೆಯ ವಾಹನಗಳ ಮಾಲಕರನ್ನು ಸಂಪರ್ಕಿಸಲಾಗುವುದು. ತಪಾಸಣೆಯ ಫಲಿತಾಂಶಗಳನ್ನು ಆಧರಿಸಿ ಅಗತ್ಯವಿರುವಲ್ಲಿ ಬಿಡಿಭಾಗಗಳನ್ನು ಬದಲಾಯಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.                              

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News