ಕತರ್‌, ಕುವೈಟ್‌ ಬಳಿಕ ಇರಾನ್‌ ನಿಂದ ಭಾರತೀಯ ರಾಯಭಾರಿಗೆ ಸಮನ್ಸ್‌

Update: 2022-06-05 17:18 GMT
 ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕತರ್ ಮತ್ತು ಕುವೈತ್ ನಂತರ, ಇರಾನ್ ಇಸ್ಲಾಂ ಧರ್ಮದ ಪ್ರವಾದಿ ವಿರುದ್ಧ ಬಿಜೆಪಿಯ ನಾಯಕರು ನೀಡಿದ ಅವಹೇಳನಕಾರಿ ಹೇಳಿಕೆಗಳ ಕುರಿತು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರಿಗೆ ಸಮನ್ಸ್‌ ನೀಡಿದೆ.

ಮುಂದಿನ ವಾರ ಇರಾನ್ ವಿದೇಶಾಂಗ ಸಚಿವರು ಹೊಸದಿಲ್ಲಿಗೆ ಮೊದಲ ಬಾರಿಗೆ ಪ್ರವಾಸಕ್ಕೆ ಆಗಮಿಸುವ ಮುಂಚಿತವಾಗಿ ಇರಾನ್ ವಿದೇಶಾಂಗ ಸಚಿವಾಲಯವು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರಿಗೆ ಸಮನ್ಸ್‌ ಹೊರಡಿಸಿದ್ದು, "ಭಾರತೀಯ ಟಿವಿ ಕಾರ್ಯಕ್ರಮದಲ್ಲಿ ಇಸ್ಲಾಂನ ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ"ಯನ್ನು ಉಲ್ಲೇಖಿಸಿದೆ.

ಈಗಾಗಲೇ ಕುವೈಟ್‌ ಮತ್ತು ಕತರ್‌ ದೇಶಗಳು ರಾಯಭಾರಿಗಳಿಗೆ ಸಮನ್ಸ್‌ ಹೊರಡಿಸಿದ್ದು, ಬಳಿಕ ರಾಯಭಾರಿಗಳು ಇದಕ್ಕೂ ಭಾರತೀಯ ಸರಕಾರದ ದೃಷ್ಟಿಕೋನಕ್ಕೂ ಯಾವುದೇ ಸಂಬಂಧವಿಲ್ಲ, ಇದೆಲ್ಲ ಒಂದು ಗುಂಪಿನ ದೃಷ್ಟಿಕೋನಗಳು ಎಂದು ಪ್ರತಿಕ್ರಿಯಿಸಿತ್ತು.

ಒಮಾನ್‌ನ ಗ್ರ್ಯಾಂಡ್ ಮುಫ್ತಿ ಸೇರಿದಂತೆ ಮಧ್ಯಪ್ರಾಚ್ಯದ ಹೆಚ್ಚಿನ ಸಂಖ್ಯೆಯ ಜನರು ಮಧ್ಯಪ್ರಾಚ್ಯ (ಗಲ್ಫ್) ಮಾರುಕಟ್ಟೆಗಳಲ್ಲಿ ಭಾರತೀಯ ಉತ್ಪನ್ನಗಳ ಸಾಮೂಹಿಕ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ನಂತರ ಹಲವಾರು ಮಾರುಕಟ್ಟೆಗಳಿಂದ ಭಾರತೀಯ ಉತ್ಪನ್ನಗಳನ್ನು ತೆಗೆದುಹಾಕಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News