×
Ad

ಅಮೆರಿಕಾದ ಫಿಲಾಡೆಲ್ಫಿಯಾದಲ್ಲಿ ಗುಂಡಿನ ದಾಳಿ: 3 ಮಂದಿ ಮೃತ್ಯು, 11 ಮಂದಿಗೆ ಗಾಯ

Update: 2022-06-05 23:59 IST

ವಾಷಿಂಗ್ಟನ್, ಜೂ.5: ಫಿಲಡೆಲ್ಪಿಯಾದ ಜನಪ್ರಿಯ ಸೌತ್ ಸ್ಟ್ರೀಟ್ ನಲ್ಲಿ ವಾರಾಂತ್ಯದ ಖರೀದಿಗೆ ಸೇರಿದ್ದ ಜನರ ಗುಂಪಿನ ಮೇಲೆ ನಡೆದ ಗುಂಡಿನ ದಾಳಿಯಲ್ಲಿ 3 ಮಂದಿ ಮೃತಪಟ್ಟಿದ್ದು 11 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸೌತ್ ಸ್ಟ್ರೀಟ್ ನಲ್ಲಿ ವಾರಾಂತ್ಯದಲ್ಲಿ ಸದಾ ಹೆಚ್ಚಿನ ಜನಗಂಗುಳಿ ಇರುತ್ತದೆ. ಶನಿವಾರ ಈ ಗುಂಪಿನ ಮೇಲೆ ಹಲವು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದಾಗ ಜನ ಕಂಗಾಲಾಗಿ ದಿಕ್ಕೆಟ್ಟು ಓಡಿದರು. ಇಬ್ಬರು ಪುರುಷರು ಮತ್ತು ಓರ್ವ ಮಹಿಳೆ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಓರ್ವ ದುಷ್ಕರ್ಮಿಯತ್ತ ಗುಂಡು ಹಾರಿಸಿದರೂ ಆತ ತಪ್ಪಿಸಿಕೊಂಡು ಪಲಾಯನ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಡಿಎಫ್ ಪೇಸ್‌ರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸ್ಥಳದಿಂದ 2 ಹ್ಯಾಂಡ್‌ಗನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳೀಯ ಅಂಗಡಿಗಳ ಸಿಸಿಟಿವಿ ಫೂಟೇಜ್‌ಗಳನ್ನು  ಪರಿಶೀಲಿಸಲಾಗುತ್ತಿದ್ದು ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News