ಕುತುಬ್ ಮಿನಾರ್ ಬಳಿಯ ಮಸೀದಿಯಲ್ಲಿ ನಮಾಝ್ ಸ್ಥಗಿತ ಪ್ರಶ್ನಿಸಿದ ಅರ್ಜಿಯ ತುರ್ತು ವಿಚಾರಣೆಗೆ ದಿಲ್ಲಿ ಹೈಕೋರ್ಟ್‌ ನಕಾರ

Update: 2022-06-06 14:19 GMT

ಹೊಸದಿಲ್ಲಿ: ನಗರದ ಮೆಹ್ರೋಲಿ ಪ್ರದೇಶದಲ್ಲಿರುವ ಕುತುಬ್ ಮಿನಾರ್ ಸಂಕೀರ್ಣದ ಪಕ್ಕದ ಮಸೀದಿಯೊಂದರಲ್ಲಿ ನಮಾಜ್ ನಿಲ್ಲಿಸಿದ್ದನ್ನು ಪ್ರಶ್ನಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ದಿಲ್ಲಿ ಹೈಕೋರ್ಟ್ ಸೋಮವಾರ ಮತ್ತೆ ನಿರಾಕರಿಸಿದೆ.

ಜಸ್ಟಿಸ್ ಮನೋಜ್ ಕುಮಾರ್ ಒಹ್ರಿ ಮತ್ತು ಜಸ್ಟಿಸ್ ಪೂನಮ್ ಎ ಬಂಬಾ ಅವರನ್ನೊಳಗೊಂಡ ರಜಾಕಾಲದ ಪೀಠ ಈ ಅರ್ಜಿಯನ್ನು ಉಲ್ಲೇಖಿಸಿ ಅದನ್ನು ವಿಚಾರಣೆ ನಡೆಸಲು ಯಾವುದೇ ತುರ್ತು ಇಲ್ಲ ಎಂದು ಹೇಳಿ ತುರ್ತು ವಿಚಾರಣೆಗೆ ಕೋರಿ ಅರ್ಜಿ ಸಲ್ಲಿಸಿದ್ದ ದಿಲ್ಲಿ ವಕ್ಫ್ ಮಂಡಳಿಯ ಆಡಳಿತ ಸಮಿತಿ ಪರ ವಕೀಲರು ಮಾಡಿದ ಮನವಿಯನ್ನು ತಿರಸ್ಕರಿಇದದೆ.

ಈ ನಿರ್ದಿಷ್ಟ ಮಸೀದಿಯ ಹೆಸರು ಮುಘಲ್ ಮಸೀದಿ ಎಂಬುದಾಗಿದ್ದು  16.4.1970 ರಂದು ಹೊರಡಿಸಲಾದ ಗಜೆಟ್ ಅಧಿಸೂಚನೆಯಂತೆ ಇದು ಗಜೆಟ್ ಅಧಿಸೂಚಿತ ವಕ್ಫ್ ಆಸ್ತಿಯಾಗಿದೆ ಹಾಗೂ ಇಲ್ಲಿ ಇಮಾಮ್ ಹಾಗೂ ಮೊವಾಝಿನ್ ಒಬ್ಬರು ಕಾರ್ಯಾಚರಿಸುತ್ತಿದ್ದಾರೆ.

ಇದೇ ನಿರ್ದಿಷ್ಟ ಪ್ರಕರಣದ ವಿಚಾರಣೆಗೆ ಈ ಹಿಂದೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಅವರ ನೇತೃತ್ವದ ವಿಭಾಗೀಯ ಪೀಠ ನಿರಾಕರಿಸಿತ್ತು.

ಈ ಮಸೀದಿ ಒಂದು ಗಜೆಟೆಡ್ ವಕ್ಫ್ ಆಸ್ತಿಯಾಗಿದ್ದರೂ ಹಾಗೂ ಇಲ್ಲಿ ಜನರು ನಿಯಮಿತವಾಗಿ ನಮಾಜ್ ಸಲ್ಲಿಸುತ್ತಿದ್ದರೂ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಮೇ 15ರಂದು ಹಠಾತ್ ಆಗಿ ನಮಾಜ್ ಸಲ್ಲಿಸುವುದನ್ನು ತಡೆದಿತ್ತು ಎಂದು ಅರ್ಜಿದಾರರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News