ಬಿಜೆಪಿ ನಾಯಕರಿಂದ ಪ್ರವಾದಿ ಅವಹೇಳನವನ್ನು ಖಂಡಿಸಿದ ಯುಎಇ

Update: 2022-06-06 15:21 GMT

ಹೊಸದಿಲ್ಲಿ: ಈಗಾಗಲೇ ಬಿಜೆಪಿ ನಾಯಕರ ಪ್ರವಾದಿ ನಿಂದನೆ ಮಾತುಗಳ ಕುರಿತು ಹಲವು ಅರಬ್‌ ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಆ ಸಾಲಿಗೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಕೂಡಾ ಸೇರ್ಪಡೆಗೊಂಡಿದೆ. ಪ್ರವಾದಿ ಮುಹಮ್ಮದ್‌ ರ ಕುರಿತಂತೆ ಅವಹೇಳನ ಮಾಡಿದ್ದು, ನಿಂದಿಸಿದ್ದನ್ನು ನಾವು ಖಂಡಿಸುತ್ತೇವೆ ಮತ್ತು ತಿರಸ್ಕರಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದ್ದಾಗಿ Khaleej Times ವರದಿ ಮಾಡಿದೆ.

ಹೇಳಿಕೆಯಲ್ಲಿ, ವಿದೇಶಾಂಗ ವ್ಯವಹಾರಗಳು ಮತ್ತು ಅಂತರರಾಷ್ಟ್ರೀಯ ಸಹಕಾರ ಸಚಿವಾಲಯ (MoFAIC) ನೈತಿಕ ಮತ್ತು ಮಾನವೀಯ ಮೌಲ್ಯಗಳು, ತತ್ವಗಳಿಗೆ ವಿರುದ್ಧವಾದ ಎಲ್ಲಾ ರೀತಿಯ ನಡವಳಿಕೆಗಳನ್ನು UAE ದೃಢವಾಗಿ ತಿರಸ್ಕರಿಸುತ್ತದೆ ಎಂದು ಹೇಳಿದೆ.

ಸಚಿವಾಲಯವು ಧಾರ್ಮಿಕ ಚಿಹ್ನೆಗಳನ್ನು ಗೌರವಿಸುವ ಮತ್ತು ಅವುಗಳನ್ನು ಉಲ್ಲಂಘಿಸದಿರುವ ಅಗತ್ಯವನ್ನು ಒತ್ತಿಹೇಳಿತು. ಜೊತೆಗೆ, ದ್ವೇಷಭಾಷಣದಿಂದಾಗಿ ಹಿಂಸಾಚಾರವನ್ನು ಎದುರಿಸಬೇಕಾಗುವ ಸಂದರ್ಭದ ಕುರಿತೂ ಉಲ್ಲೇಖಿಸಿದೆ. ಸಹಿಷ್ಣುತೆ ಮತ್ತು ಮಾನವ ಸಹಬಾಳ್ವೆಯ ಮೌಲ್ಯಗಳನ್ನು ಹರಡಲು ಅಂತರರಾಷ್ಟ್ರೀಯ ಜವಾಬ್ದಾರಿಯನ್ನು ಬಲಪಡಿಸುವ ಪ್ರಾಮುಖ್ಯತೆಯನ್ನು ಸಚಿವಾಲಯವು ಗಮನಿಸಿದೆ ಮತ್ತು ವಿವಿಧ ಧರ್ಮಗಳ ಅನುಯಾಯಿಗಳ ಭಾವನೆಗಳನ್ನು ಪ್ರಚೋದಿಸುವ ಯಾವುದೇ ಆಚರಣೆಗಳನ್ನು ತಡೆಯುತ್ತದೆ ಎಂದು ಅದು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News