ಮಂಗಳೂರು : ಎ.ಜೆ. ಆಸ್ಪತ್ರೆಯಲ್ಲಿ ಮೊದಲ ಬಾರಿ ನವಜಾತ ಶಿಶುವಿಗೆ ಹೈಬ್ರಿಡ್ ಹೃದಯ ಶಸ್ತ್ರಶಿಕಿತ್ಸೆ
ಮಂಗಳೂರು : ಎ.ಜೆ. ಆಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ಪಿನ್ ಹೋಲ್ ಹೈಬ್ರಿಡ್ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಈ ಮೂಲಕ ಮಂಗಳೂರಿನಲ್ಲಿ ಮೊದಲ ಬಾರಿಗೆ ಈ ಶಸ್ತ್ರಚಿಕಿತ್ಸೆ ಮಾಡಿರುವ ಹೆಗ್ಗಳಿಕೆ ಎ.ಜೆ. ಆಸ್ಪತ್ರೆಯದ್ದಾಗಿದೆ.
ಶಿಶುವಿಗೆ ಹೃದಯದಲ್ಲಿ ದೋಷವಿದೆ ಎಂದು ತಿಳಿದು, ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಕ್ಕಳ ಹೃದ್ರೋಗ ತಜ್ಞ ಡಾ. ಪ್ರೇಮ್ ಆಳ್ವ, ಹಿರಿಯ ಕಾರ್ಡಿಯೋಥೊರಾಸಿಕ್ ತಜ್ಞ ಡಾ. ಜಯಶಂಕರ್ ಮಾರ್ಲಾ, ಡಾ. ಗುರುರಾಜ್ ತಂತ್ರಿ ಹಾಗು ಡಾ. ಸುಹಾಸ್ ಅವರ ನೇತೃತ್ವದ ತಂಡವು ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ.
ನವಜಾತ ಶಿಶುತಜ್ಞ ಡಾ. ಅಶ್ವಿಜ್ ಶ್ರೀಯಾನ್ ಅವರು ಶಸ್ತ್ರಚಿಕಿತ್ಸೆಯ ನಂತರ ಮಗುವಿನ ವಾತಯಾನದ ಮೇಲೆ ನಿಗಾ ವಹಿಸುವ ಮೂಲಕ ಪ್ರಮುಖ ಪಾತ್ರ ವಹಿಸಿದರು. ಈ ಶಸ್ತ್ರಚಿಕಿತ್ಸೆಯನ್ನು ಸರಕಾರಿ ಸ್ಕೀಮ್ ನಲ್ಲಿ ಉಚಿತವಾಗಿ ಮಾಡಲಾಯಿತು ಎಂದು ಮೆಡಿಕಲ್ ಡೈರೆಕ್ಟರ್ ಆ್ಯಂಡ್ ಟ್ರಾನ್ಸ್ ಪ್ಲಾಂಟ್ ಸರ್ಜನ್ ಡಾ. ಪ್ರಶಾಂತ್ ಮಾರ್ಲ ಕೆ.ಎಂ.ಎಸ್. ಎಂ.ಸಿ.ಎಚ್ (ಯುರಾಲಜಿ) ಪ್ರಕಟನೆಯಲ್ಲಿ ತಿಳಿಸಿದ್ದಾರೆ.