×
Ad

ಪ್ರವಾದಿ ನಿಂದನೆ ಪ್ರಕರಣ: ʼಧರ್ಮಾಂಧತೆಯʼ ಕುರಿತು ಭಾರತಕ್ಕೆ ತಾಲಿಬಾನ್‌ ಪಾಠ

Update: 2022-06-07 16:47 IST
PHOTO: REUTERS

ಹೊಸದಿಲ್ಲಿ: ಈಗ ಉಚ್ಛಾಟನೆಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮ ಅವರು ಪ್ರವಾದಿ ಮುಹಮ್ಮದ್ ಅವರ ವಿರುದ್ಧ ನೀಡಿದ ಹೇಳಿಕೆಗಳನ್ನು ಖಂಡಿಸಿ ಜಗತ್ತಿನ ಹಲವು ದೇಶಗಳು ಹೇಳಿಕೆ ನೀಡಿದ ಬೆನ್ನಿಗೇ ಈಗ ಅಫ್ಗಾನಿಸ್ತಾನದಲ್ಲಿರುವ ತಾಲಿಬಾನ್ ಸರಕಾರ ಕೂಡ ತನ್ನ ಹೇಳಿಕೆ ನೀಡಿದೆ.

ತಾಲಿಬಾನಿ ವಕ್ತಾರ ಝಬೀಹುಲ್ಲಾಹ್ ಮುಜಾಹಿದ್ ಅವರು ಹೇಳಿಕೆ ನೀಡಿ "ಇಂತಹ ಧರ್ಮಾಂಧರಿಗೆ ಪವಿತ್ರ ಇಸ್ಲಾಂ ಧರ್ಮವನ್ನು ಅವಮಾನಿಸಲು ಮತ್ತು ಮುಸ್ಲಿಮರ ಭಾವನೆಗಳನ್ನು ಕೆರಳಿಸಲು ಅವಕಾಶ ನೀಡಬಾರದು ಎಂದು ನಾವು ಭಾರತ ಸರಕಾರವನ್ನು ಆಗ್ರಹಿಸುತ್ತೇವೆ" ಎಂದಿದ್ದಾರೆ.

"ಭಾರತದ ಆಡಳಿತ ಪಕ್ಷದಿಂದ ಇಸ್ಲಾಂನ ಪ್ರವಾದಿಯ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಗಾನಿಸ್ತಾನ್ ಬಲವಾಗಿ ಖಂಡಿಸುತ್ತದೆ" ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ಇರಾನ್, ಇರಾಕ್, ಕುವೈತ್, ಕತಾರ್, ಸೌದಿ ಅರೇಬಿಯಾ, ಪಾಕಿಸ್ತಾನ, ಓಮನ್, ಯುಎಇ, ಜೋರ್ಡನ್, ಬಹರೈನ್. ಮಾಲ್ದೀವ್ಸ್, ಲಿಬಿಯ ಮತ್ತು ಇಂಡೊನೇಷ್ಯಾ ಬಿಜೆಪಿ ನಾಯಕರ ಹೇಳಿಕೆಗಳನ್ನು ಖಂಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News