ಪ್ರವಾದಿ ಅವಹೇಳನ ಪ್ರಕರಣವನ್ನು ಖಂಡಿಸಿದ ಮಲೇಶ್ಯ
ಕೌಲಾ ಲಂಪುರ್: ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮುಹಮ್ಮದ್ ರವರ ವಿರುದ್ಧ ಮಾಡಿದ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿದ ದೇಶಗಳ ಸಾಲಿಗೆ ಇದೀಗ ಮಲೇಶ್ಯ ಕೂಡಾ ಸೇರಿಕೊಂಡಿದೆ.
ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ಭಾರತೀಯ ರಾಜಕಾರಣಿಗಳ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿ ಮಲೇಶ್ಯ ವಿದೇಶಾಂಗ ಸಚಿವಾಲಯವು ಭಾರತದ ಹೈಕಮಿಷನರ್ ರನ್ನು ಮಲೇಶ್ಯಕ್ಕೆ ಕರೆಸಿದೆ ಎಂದು ಹೇಳಿದೆ.
ಇಸ್ಲಾಮೋಫೋಬಿಯಾವನ್ನು ಕೊನೆಗೊಳಿಸಲು ಮತ್ತು ಶಾಂತಿ ಮತ್ತು ಸ್ಥಿರತೆಯ ಹಿತದೃಷ್ಟಿಯಿಂದ ಯಾವುದೇ ಪ್ರಚೋದನಕಾರಿ ಕೃತ್ಯಗಳನ್ನು ನಿಲ್ಲಿಸಲು ಭಾರತವು ಒಟ್ಟಾಗಿ ಕೆಲಸ ಮಾಡಲು ಮಲೇಶ್ಯ ಕರೆ ನೀಡಿದೆ ಎಂದು ಪ್ರಕಟನೆಯಲ್ಲಿ ಹೇಳಲಾಗಿದೆ.
"ಪ್ರವಾದಿ ಮುಹಮ್ಮದ್ (ಸ.ಅ) ವಿರುದ್ಧ ಭಾರತೀಯ ರಾಜಕಾರಣಿಗಳ ಅವಹೇಳನಕಾರಿ ಹೇಳಿಕೆಗಳನ್ನು ಮಲೇಶ್ಯ ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತದೆ. ಮಲೇಷ್ಯಾದ ವಿದೇಶಾಂಗ ಸಚಿವಾಲಯವು ಇಂದು ಮಧ್ಯಾಹ್ನ ಮಲೇಶ್ಯಕ್ಕೆ ಭಾರತದ ಹೈಕಮಿಷನರ್ ಅವರನ್ನು ಕರೆಸಿದೆ. ಮುಸ್ಲಿಂ ಉಮ್ಮಾದಲ್ಲಿ ಕ್ರೋಧವನ್ನು ಹುಟ್ಟುಹಾಕಿರುವ ಪ್ರಚೋದನಕಾರಿ ಹೇಳಿಕೆ ನೀಡಿದ ಪಕ್ಷದ ಪದಾಧಿಕಾರಿಗಳನ್ನು ಆಡಳಿತ ಪಕ್ಷದಿಂದ ಅಮಾನತು ಮಾಡಿರುವುದನ್ನು ಮಲೇಶ್ಯ ಸ್ವಾಗತಿಸಿದೆ. ಇಸ್ಲಾಮೋಫೋಬಿಯಾ ಕೊನೆಗೊಳಿಸಲು ಮತ್ತು ಶಾಂತಿ ಮತ್ತು ಸ್ಥಿರತೆಯ ಹಿತದೃಷ್ಟಿಯಿಂದ ಯಾವುದೇ ಪ್ರಚೋದನಕಾರಿ ಕೃತ್ಯಗಳನ್ನು ನಿಲ್ಲಿಸಲು ಭಾರತವು ಒಟ್ಟಾಗಿ ಕೆಲಸ ಮಾಡುವಂತೆ ಮಲೇಶ್ಯ ಕರೆ ನೀಡಿದೆ”
ಈ ಹಿಂದೆ, ಇರಾಕ್, ಇರಾನ್, ಕುವೈತ್, ಕತಾರ್, ಸೌದಿ ಅರೇಬಿಯಾ, ಓಮನ್, ಮಲೇಷ್ಯಾ, ಯುಎಇ, ಜೋರ್ಡಾನ್, ಅಫ್ಘಾನಿಸ್ತಾನ, ಪಾಕಿಸ್ತಾನ, ಬಹ್ರೇನ್, ಮಾಲ್ಡೀವ್ಸ್, ಲಿಬಿಯಾ, ಟರ್ಕಿ ಮತ್ತು ಇಂಡೋನೇಷ್ಯಾ ಸೇರಿದಂತೆ ಕನಿಷ್ಠ 16 ದೇಶಗಳು ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಭಾರತ ಸರ್ಕಾರದ ವಿರುದ್ಧ ಅಧಿಕೃತ ಪ್ರತಿಭಟನೆಗಳನ್ನು ದಾಖಲಿಸಿವೆ.
Malaysia condemns derogatary remarks against Prophet Muhammad, India's High Commissioner summonned https://t.co/RagMUcHkvB pic.twitter.com/AZyLLT1Nw4
— BERNAMA (@bernamadotcom) June 7, 2022