×
Ad

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ನೀರಿಗೆ ಇಳಿಯದಂತೆ ಸುರಕ್ಷತಾ ತಡೆಬೇಲಿ ನಿರ್ಮಾಣ

Update: 2022-06-08 20:12 IST

ಉಡುಪಿ: ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ದುಗೊಳ್ಳುತ್ತಿರುವುದರಿಂದ ಪ್ರವಾಸಿಗರು ನೀರಿಗೆ ಇಳಿಯದಂತೆ ತಡೆ ಯಲು ಮಲ್ಪೆ ಬೀಚ್‌ನಲ್ಲಿ ಸುರಕ್ಷತಾ ಕ್ರಮವಾಗಿ ತಡೆಬೇಲಿಗಳನ್ನು ನಿರ್ಮಿಸಲಾಗಿದೆ.

ಎರಡು ದಿನಗಳ ಹಿಂದೆ ಮಲ್ಪೆ ಬೀಚಿನ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಉತ್ತರ ಕರ್ನಾಟಕದ ಆರು ಮಂದಿ ಪ್ರವಾಸಿಗರನ್ನು ಜೀವರಕ್ಷಕ ದಳದವರು ರಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಮಲ್ಪೆ ಅಭಿವೃದ್ಧಿ ಸಮಿತಿಯು ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ತಡೆಯಲು ಈ ಸುರಕ್ಷತಾ ಕ್ರಮಗಳನ್ನು ಕೈಗೆತ್ತಿಕೊಂಡಿದೆ.

ಬೀಚ್‌ನಲ್ಲಿ ಸುರಕ್ಷತಾ ಬೇಲಿಯಾಗಿ ಬಲೆಗಳನ್ನು ಆಳವಡಿಸಲಾಗಿದ್ದು, ಅಪಾಯ ಸೂಚಿಸಲು ಕೆಂಪು ಧ್ವಜಗಳನ್ನು ಇರಿಸಲಾಗಿದೆ. ಬೀಚ್‌ನಲ್ಲಿ ಒಂದು ಕಿ.ಮೀ.ವರೆಗೂ ಸುಮಾರು 6 ಅಡಿ ಎತ್ತರದಲ್ಲಿ ಬಲೆಯನ್ನು ಹಾಕಲಾಗಿದೆ.  ಅದೇ ರೀತಿ ಎಚ್ಚರಿಕೆಯ ಬ್ಯಾನರ್‌ಗಳೊಂದಿಗೆ ಕೆಂಪು ಧ್ವಜಗಳನ್ನು ಇರಿಸಲಾಗಿದೆ.

ಈ ಮೂಲಕ ಪ್ರವಾಸಿಗರು ಸಮುದ್ರಕ್ಕೆ ಪ್ರವೇಶಿಸುವುದು ಮತ್ತು ನೀರಿಗೆ ಇಳಿಯುವುದನ್ನು ನಿಷೇಧಿಸಲಾಗಿದೆ. ಪ್ರವಾಸಿಗರು ಈ ತಡೆ ಬೇಲಿಯನ್ನು ಮೀರಿ ಸಮುದ್ರಕ್ಕೆ ಇಳಿದರೆ 500 ರೂ. ದಂಡ ವಿಧಿಸಲಾಗುವುದು ಎಂದು ಬೀಚ್ ಉಸ್ತುವಾರಿ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News