ಕೆಎಂಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಯುಪಿಎಸ್ಸಿ ಸಾಧಕ ಶೌಕತ್ ಅಝೀಮ್ ಗೆ ಸನ್ಮಾನ
Update: 2022-06-09 22:19 IST
ಕಾರ್ಕಳ : ಯುಪಿಎಸ್ಸಿ ಪರೀಕ್ಷೆಯಲ್ಲಿ 545ನೇ ರ್‍ಯಾಂಕ್ ಪಡೆದ ಕಾರ್ಕಳ ಜರಿಗುಡ್ಡೆಯ ಮೊಹಮ್ಮದ್ ಶೌಕತ್ ಅಝೀಮ್ ಅವರನ್ನು ಕೆ.ಎಂ.ಇ.ಎಸ್. ಸಂಸ್ಥೆ ವತಿಯಿಂದ ಗುರುವಾರ ಸನ್ಮಾನಿಸಲಾಯಿತು.
ಇಲ್ಲಿನ ಹಳೆ ವಿದ್ಯಾರ್ಥಿಯಾಗಿರುವ ಶೌಕತ್ ಅವರು ಅಭಿನಂದನೆ ಸ್ವೀಕರಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಶ್ರೀಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಕೋಟ್ಯಾನ್, ಕೆಎಂಇಎಸ್ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎಸ್. ಇಮ್ತಿಯಾಜ್ ಅಹಮ್ಮದ್, ಆಡಳಿತ ಸಮಿತಿ ಸದಸ್ಯ ಮಹಮ್ಮದ್ ನದಾಫ್, ಕಾಲೇಜಿನ ಪ್ರಾಂಶುಪಾಲ ರಾಮಚಂದ್ರ ನೆಲ್ಲಿಕಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆ ಪಿಆರ್‌ಒ ಜ್ಯೋತಿ ಪದ್ಮನಾಭ ಭಂಡಿ, ಶಿಕ್ಷಕಿ ಗೀತಾ ಶೆಟ್ಟಿಗಾರ್ ಶೌಕತ್ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿ ಸುಮಾನ್ ಸ್ವಾಗತಿಸಿ, ಲೊಲಿತಾ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿದರು. ಅನಿತಾ ಸನ್ಮಾನ ಪತ್ರ ವಾಚಿಸಿದರು. ಪೂಜಾ ವಂದಿಸಿದರು.