ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಝ್‌ ಮುಷರಫ್‌ ಆರೋಗ್ಯ ಸ್ಥಿತಿ ಗಂಭೀರ

Update: 2022-06-10 13:13 GMT
Photo: twitter.com/P_Musharraf

ದುಬೈ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಝ್ ಮುಷರಫ್ ಅವರ ಅಂಗಾಂಗಗಳು ವೈಫಲ್ಯವಾಗಿದೆ, ಅವರು ಚೇತರಿಸಿಕೊಳ್ಳಲು ಸಾಧ್ಯವಿಲ್ಲದ ಹಂತಕ್ಕೆ ತಲುಪಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿರುವುದಾಗಿ Indiatoday.in ವರದಿ ಮಾಡಿದೆ. 
 
"ಅವರು ವೆಂಟಿಲೇಟರ್‌ನಲ್ಲಿಲ್ಲ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಕಳೆದ 3 ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೇತರಿಕೆ ಸಾಧ್ಯವಾಗದ ಮತ್ತು ಅಂಗಾಂಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಕಠಿಣ ಹಂತವನ್ನು ಎದುರಿಸುತ್ತಿದ್ದಾರೆ. ಅವರ ದೈನಂದಿನ ಜೀವನವು ಸುಲಭವಾಗಲಿ ಎಂದು ಪ್ರಾರ್ಥಿಸಿ, " ಎಂದು ಪರ್ವೇಜ್ ಪರ್ವೇಝ್  ಅವರ ಅಧಿಕೃತ ಟ್ವಿಟರ್ ಅಕೌಂಟ್‌ ಮೂಲಕ ಟ್ವೀಟ್‌ ಮಾಡಲಾಗಿದೆ.

ಪರ್ವೇಝ್ ಮುಷರಫ್ ಅವರು ಶುಕ್ರವಾರ ನಿಧನರಾಗಿದ್ದಾರೆಂದು ಕೆಲವು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದು, ಇದು ಗೊಂದಲವನ್ನು ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಮುಷರಫ್ ಅವರ ಕುಟುಂಬ ಮೂಲಗಳು ಈ ಟ್ವೀಟ್‌ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News