ಪ್ರತಿಭಟನೆ ಶಾಂತಿಯುತ, ಸಂವಿಧಾನ ಬದ್ಧವಾಗಿರಲಿ: ಯು.ಟಿ.ಖಾದರ್

Update: 2022-06-10 15:00 GMT

ಬೆಂಗಳೂರು: ದ್ವೇಷ ಹಾಗೂ ವಿವೇಚನಾ ರಹಿತವಾದ ಹೇಳಿಕೆ ಇಂದು ದೇಶದ ಸೌಹಾರ್ದ ಮತ್ತು ಜನಸಾಮಾನ್ಯರ ನೆಮ್ಮದಿಯನ್ನು ಕೆಡಿಸಿದೆ.ಇಂಥಹ ಬೇಜವಾಬ್ದಾರಿ ಹೇಳಿಕೆಗಳು ದೇಶವನ್ನು ಯಾವ ಪರಿಸ್ಥಿತಿಗೆ ತಂದು ನಿಲ್ಲಿಸಬಹುದು ಎಂಬು ದೇಶದಲ್ಲಿ ಈಗ ನಡೆಯುತ್ತಿರುವ ಬೆಳವಣೆಗೆ ಒಂದು ಉದಾಹರಣೆ.ಕೋಮುಭಾವನೆ ಕೆರಳಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಸರಕಾರದ ಜವಾಬ್ದಾರಿ.ಈಗಾಗಿ ಬಿಜೆಪಿ ವಕ್ತಾರ ನೂಪುರ್ ಶರ್ಮಾ ವಿರುದ್ಧ ಸರಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಯು.ಟಿ ಖಾದರ್, ' ಬಿಜೆಪಿಗರು ಮಾಡಿದ ತಪ್ಪಿಗೆ ದೇಶ ಯಾರ ಮುಂದೆಯೂ ಕ್ಷಮೆ ಕೇಳುವ ಮಾತೇ ಇಲ್ಲ.ಈ ಘಟನೆಯಿಂದ ಇನ್ನಾದರೂ ಎಚ್ಚೆತ್ತು ಶತಶತಮಾನಗಳಿಂದ ಬಹುತ್ವದ ತಳಹದಿಯಲ್ಲೇ ಜನ್ಮವೆತ್ತ ಭಾರತದ ಆತ್ಮವನ್ನ ಕೊಲ್ಲುವ ಪ್ರಯತ್ನ ಬಿಜೆಪಿಯ ಅಂಗಸಂಸ್ಥೆಗಳು ನಿಲ್ಲಿಸಲಿ' ಎಂದು ಆಗ್ರಹಿಸಿದರು.

ಭಾವನೆಗಳಿಗೆ ನೋವಾದಾಗ ಸಂವಿಧಾನ ಬದ್ಧವಾಗಿ ಪ್ರತಿಭಟನೆ ಮಾಡುವುದು ಬಿಟ್ಟು ಕಾನೂನು ಕೈಗೆತ್ತಿಕೊಂಡು ದುಂಡಾವರ್ತನೆ ತೋರುವುದು ಸರಿಯಲ್ಲ.ಇದಕ್ಕೆ ಸರಕಾರ ಅವಕಾಶ ನೀಡದೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News