×
Ad

ಮುಲ್ಕಿ ರೈಲು ನಿಲ್ದಾಣದಲ್ಲಿ ಮಂಗಳೂರು - ಮುಂಬೈ ಎಕ್ಸ್‌ಪ್ರೆಸ್ ನಿಲುಗಡೆ

Update: 2022-06-11 15:48 IST
ಸಾಂದರ್ಭಿಕ ಚಿತ್ರ

ಮಂಗಳೂರು : ಮುಲ್ಕಿ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕೊಂಕಣ ರೈಲ್ವೇಯ  ಮಂಗಳೂರು - ಮುಂಬೈ ನಡುವೆ ಸಂಚರಿಸುವ ಮಂಗಳೂರು ಎಕ್ಸ್ ಪ್ರೆಸ್ ಇಂದಿನಿಂದ ಮುಲ್ಕಿ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ.

ಪ್ರತಿದಿನ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಮುಂಬೈ ಛತ್ರಪತಿ ಶಿವಾಜಿ ಟರ್ಮಿನಲ್ ಗೆ ಸಂಚರಿಸುತ್ತಿದ್ದ ಗಾಡಿ ಸಂಖ್ಯೆ 12134 ಮಂಗಳೂರು ಜಂಕ್ಷನ್‌ - ಛತ್ರಪತಿ ಶಿವಾಜಿ ಟರ್ಮಿನಲ್ ಮುಂಬೈ (ಸಿಎಸ್ ಟಿ) ಸಂಚಾರ ನಡೆಸುತ್ತಿರುವ ಮಂಗಳೂರು ಎಕ್ಸ್ ಪ್ರೆಸ್ ರೈಲು ಗಾಡಿಯು ಮುಲ್ಕಿ ರೈಲು ನಿಲ್ದಾಣಕ್ಕೆ 17:26ಕ್ಕೆ ತಲುಪಿ 17:28ಕ್ಕೆ ಮುಂಬೈಗೆ ಹೊರಡಲಿದ್ದು, ಮುಲ್ಕಿಯಲ್ಲಿ ಎರಡು ನಿಮಿಷಗಳ ಕಾಲ ನಿಲ್ಲಲಿದೆ.‌

ಅದೇ ರೀತಿ ಛತ್ರಪತಿ ಶಿವಾಜಿ ಟರ್ಮಿನಲ್ ನಿಂದ ಮಂಗಳೂರು ಜಂಕ್ಷನ್ ಗೆ ಬರುವ ಗಾಡಿ ಸಂಖ್ಯೆ 12 133 ಮಂಗಳೂರು ಎಕ್ಸ್ ಪ್ರೆಸ್ ಮಧ್ಯಾಹ್ನ 13:42ಕ್ಕೆ ಆಗಮಿಸಿ 13:44 ಕ್ಕೆ ಮಂಗಳೂರಿಗೆ ಹೊರಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News