ಪರ್ಕಳದಲ್ಲಿ ಹುಚ್ಚು ನಾಯಿ ಹಾವಳಿ: ಭಯದ ವಾತಾವರಣ
Update: 2022-06-11 18:37 IST
ಪರ್ಕಳ: ಪರ್ಕಳ ಪರಿಸರದಲ್ಲಿ ಹುಚ್ಚು ನಾಯಿ ಹಾವಳಿ ಹೆಚ್ಚಾಗಿದ್ದು, ಹಲವು ಜನರಿಗೆ ಹಾಗೂ ಪಶುಗಳಿಗೆ ಕಚ್ಚಿರುವುದರಿಂದ ಭೀತಿಯ ವಾತಾವರಣ ಸೃಷ್ಠಿಯಾಗಿದೆ.
ಪರ್ಕಳ, ಶೆಟ್ಟಿಬೆಟ್ಟು, ಹೆರ್ಗ, ಅಚ್ಯುತ ನಗರ, ಮಾರುತಿ ನಗರ, ಗ್ಯಾಟ್‌ಸನ್ ಕಾಲನಿ ಪರಿಸರದಲ್ಲಿ ಹುಚ್ಚು ನಾಯಿಗಳ ಕಡಿತ ಮತ್ತು ಕಾಟದಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳು ಹಾಗೂ ಕೆಲಸ ಕಾರ್ಯಗಳಿಗೆ ಹೋಗುವ ಮಹಿಳೆಯರು ಹುಚ್ಚು ನಾಯಿ ಹಾವಳಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಕೆಲವು ಮಂದಿ ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ನಗರಸಭೆಯ ಆರೋಗ್ಯಾಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಆಗ್ರಹಿಸಿದ್ದಾರೆ.