ಮಂಗಳೂರು : ಬ್ಯಾರೀಸ್ ಟ್ಯಾಲೆಂಟ್ ಹಂಟ್, ಕ್ಯಾಂಪಸ್ ಕನೆಕ್ಟ್-2022 ಕಾರ್ಯಕ್ರಮ

Update: 2022-06-11 15:55 GMT

ಕೊಣಾಜೆ: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ವತಿಯಿಂದ ಬ್ಯಾರೀಸ್ ಟ್ಯಾಲೆಂಟ್ ಹಂಟ್ ಮತ್ತು ಕ್ಯಾಂಪಸ್ ಕನೆಕ್ಟ್-2022 ಕಾರ್ಯಕ್ರಮ ಇನೋಳಿ ಬ್ಯಾರೀಸ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ನಡೆಯಿತು.

ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ನಾಯಕರ ಅನ್ವೇಷಣೆಯೊಂದಿಗೆ ಪ್ರಗತಿಶೀಲ ಜಗತ್ತಿಗೆ ಗಣನೀಯ ಕೊಡುಗೆ ನೀಡುವ ಉದ್ದೇಶದಿಂದ ಟ್ಯಾಲೆಂಟ್ ಹಂಟ್ ಮತ್ತು ಕ್ಯಾಂಪಸ್ ಕನೆಕ್ಟ್  ಕಾರ್ಯಕ್ರಮದ ಅಂಗವಾಗಿ ನಡೆಸಿದ ಪರೀಕ್ಷೆಯಲ್ಲಿ ಕರ್ನಾಟಕ ಮತ್ತು ಕೇರಳದ ಅನೇಕ ವಿದ್ಯಾರ್ಥಿಗಳು ಹಾಜರಾಗಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ʼಬಿಐಟಿʼ ಪಾಲಿಟೆಕ್ನಿಕ್‌ ನಿರ್ದೇಶಕ ಡಾ. ಅಝೀಝ್ ಮುಸ್ತಫಾ ಅವರು "ವೃತ್ತಿಪರ ಕೋರ್ಸ್‌ಗಳಿಗೆ ಅವಕಾಶಗಳು" ಕುರಿತು ಉಪನ್ಯಾಸ ನೀಡಿದರು.

ಉಪನ್ಯಾಸಕರಾದ ಮುಮ್ತಾಝ್  ಭಾಗವಹಿಸಿದವರಿಗೆ ವಿದ್ಯಾರ್ಥಿ ವೇತನದ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಬಿಐಟಿ ಕ್ಯಾಂಪಸ್ ಬಗ್ಗೆ ಪರಿಚಯಿಸಲಾಯಿತು.

ಈ ಸಂದರ್ಭ ಪ್ರತಿಭಾನ್ವೇಷಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಾದ ದೇರಬೈಲ್‌ನ ಸ್ಯಾಮ್ಯುಯೆಲ್ ಲಾಝರಸ್ ಪೂರ್ಣಮಟ್ಟದ ವಿದ್ಯಾರ್ಥಿ ವೇತನ ಹಾಗೂ ವಿಟ್ಲದ ಸಲೀಲಾ ಮತ್ತು ಮಂಗಳೂರಿನ ಮಾಸ್ತಿಕಟ್ಟೆಯ ಅಹ್ಮದ್ ಅಸ್ಗರ್ ಹುಸೈನ್ ಅವರಿಗೆ ಅರ್ಧದಷ್ಟು ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಪ್ರತಿಭಾ ಕೌಶಲದ ಆಧಾರದಲ್ಲಿ ಇತರ ಕೆಲವು ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಬ್ಯಾರೀಸ್ ಎನ್ವೀರೊ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (ಬೀಡ್ಸ್‌) ಪ್ರಾಂಶುಪಾಲ ಅಶೋಕ್ ಮೆಂಡೊನ್ಸಾ, ಸಿಇಟಿ ಕೋಚಿಂಗ್‌ನ ಸಂಯೋಜಕ ಡಾ. ಅಂಜುಮ್ ಖಾನ್, ಟ್ಯಾಲೆಂಟ್ ಹಂಟ್‌ನ ಸಂಯೋಜಕಿ  ಪ್ರಫುಲ್ಲಾ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

ಬಿಐಟಿ ಪ್ರಾಂಶುಪಾಲರಾದ ಡಾ. ಮಂಜೂರ್ ಬಾಷಾ ಸ್ವಾಗತಿಸಿದರು. ಪ್ರಾಂಶುಪಾಲ ಅಶೋಕ್ ಮೆಂಡೊನ್ಸಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News